ಧರ್ಮಸ್ಥಳ ಯೋಜನೆ : ಅಜ್ಜಾವರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪದಗ್ರಹಣ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಅಜ್ಜಾವರ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಪೇರಾಲು ಪೇರಾಲು ಎ ಮಂಡೆಕೋಲು, ಕಲ್ಲಡ್ಕ ಪೆರಾಜೆ ಪ್ರಗತಿ ಬಂಧು ಸ್ವ ಸಹಾಯ ಸಂಘ ಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜೂ.28ರಂದು ಪೇರಾಲು ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೆ ಧ ಗ್ರಾ ಯೋ ಜಿಲ್ಲಾ ನಿರ್ದೇಶಕರಾದಬಾಬು ನಾಯ್ಕ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮತ್ತು ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡ, ತಾಲೂಕು ಯೋಜನಾಧಿಕಾರಿ ಗಳಾದ ಶ್ರೀಮಾಧವ ಗೌಡ. ಆಗಮಿಸಿದ್ದರು. ಪ್ರತಿಷ್ಠಿತ ಶ್ರೀಪಾದ ಕನ್ಸಲ್ಟೆನ್ಸಿ , ಸಂಸ್ಥೆಯ ಇಂಜಿನಿಯರ್ ಆಗಿರುವ ಶ್ರೀಮತಿ ಡಾ. ಸೌಮ್ಯ ಎನ್ ಜೆ ಅಡ್ಡಂತಡ್ಕ ಇವರು ಧಾರ್ಮಿಕ ಉಪನ್ಯಾಸ ನೀಡಿದರು.