














ಸಂಪಾಜೆ, ಸೆಪ್ಟೆಂಬರ್ 18: ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.), ಸಂಪಾಜೆ-ಕಲ್ಲುಗುಂಡಿ ಇದರ ಮಾಸಿಕ ಒಕ್ಕೂಟ ಸಭೆಯು ಶುಕ್ರವಾರ ಒಕ್ಕೂಟದ ಅಧ್ಯಕ್ಷರಾದ ದೇವಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಪಂಚಾಯತ್ನ ವಲಯ ಮೇಲ್ವಿಚಾರಕರಾದ ಶ್ರೀಮತಿ ರೂಪ ಭಾಗವಹಿಸಿ ಲೋಕೋಸ್ ಹಾಗೂ ಇ-ಕೆವೈಸಿ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಅಕ್ಕ ಕೆಫೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಒಕ್ಕೂಟದ ಸಿಬ್ಬಂದಿಗಳಾದ ಕೃಷಿ ಸಖಿ, ಪಶು ಸಖಿ ಮಾಲತಿ, ಎಲ್ಸಿಆರ್ಪಿ ಸೌಮ್ಯ, ಭಾರತಿ ಉಪಸ್ಥಿತರಿದ್ದರು. ಸಾಲದ ಬೇಡಿಕೆ ಸಲ್ಲಿಸಿದ್ದ ಸಂಘಗಳ ಅರ್ಹ ಸದಸ್ಯೆಯರಿಗೆ ವಲಯ ಮೇಲ್ವಿಚಾರಕರಾದ ಶ್ರೀಮತಿ ರೂಪ ಅವರ ಉಪಸ್ಥಿತಿಯಲ್ಲಿ ಸಾಲ ವಿತರಣೆ ಮಾಡಲಾಯಿತು. ಕೃಷಿ ಸಖಿ ಇಲಾಖೆಗಳ ಮಾಹಿತಿ ಮತ್ತು ಅಕ್ಟೋಬರ್ 6 ರಂದು ಕೃಷಿ ವಿಜ್ಞಾನ ಕೇಂದ್ರ ದ ಕ ಮಂಗಳೂರುನಲ್ಲಿ ಅಣಬೆ ಕೃಷಿ ತರಬೇತಿ ನಡೆಯಲಿದ್ದು, ಆಸಕ್ತರು ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆ ಎಂ.ಬಿ.ಕೆ. ಕಾಂತಿ ಬಿ.ಎಸ್, ಸ್ವಾಗತವನ್ನು ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಹಾಗೂ ಧನ್ಯವಾದವನ್ನು ಉಪಕಾರ್ಯದರ್ಶಿ ಕಾವ್ಯ ನೆರವೇರಿಸಿದರು.







