ಆಶಿಕಾ ಮುಂಡಾಜೆ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ

0

ಅಖಿಲ ಭಾರತ ಒಕ್ಕಲಿಗರ ಮಹಾಸಭಾ ಮತ್ತು ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರಕ್ಕೆ ಆಶಿಕಾ ಮುಂಡಾಜೆ ಆಯ್ಕೆಯಾಗಿದ್ದಾರೆ.
ಸೆ. ೨೭ರಂದು ನಡೆಯುವ ರಾಜ್ಯ ಮಟ್ಟದ ಒಕ್ಕಲಿಗ ಹಾಗೂ ಅದರ ೧೧೬ ಉಪಜಾತಿಗಳ ಸ್ನೇಹ ಮಿಲನ – ಅಭಿನಂದನೆ – ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.