2025- 26 ನೇ ಸಾಲಿನಲ್ಲಿ ಸಂಸ್ಥೆಯು 80 ಕೋಟಿ ರೂಪಾಯಿಗಳ ವ್ಯವಹಾರ ಮಾಡಿರುವುದು ಸಂತಸ ತಂದಿದೆ : ಅಧ್ಯಕ್ಷ ಇಕ್ಬಾಲ್ ಎಲಿಮಲೆ

ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.19 ರಂದು ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ( ಸಿ ಎ ಬ್ಯಾಂಕ್ ಹಾಲ್) ನಲ್ಲಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಐ.ಕೆ ಎಲಿಮಲೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತವಿಕ ಮಾತನಾಡಿದ ಅಧ್ಯಕ್ಷ ಇಕ್ಬಾಲ್ ರವರು ಸಂಸ್ಥೆಯು 2025 26 ನೇ ಸಾಲಿನಲ್ಲಿ 80 ಕೋಟಿ ರೂಪಾಯಿಗಳ ವ್ಯವಹಾರ ಮಾಡಿರುವುದು ಸಂತಸ ತಂದಿದೆ. ಈ ಯಶಸ್ವಿಗೆ ನಮ್ಮ ಸಂಘದ ಎಲ್ಲಾ ಸದಸ್ಯರಗಳ ಸಹಕಾರ ಪೂರಕವಾಗಿ ಲಭಿಸಿದೆ ಎಂದು ಹೇಳಿದರು.















ಮಹಾಸಭೆಯ ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಫಾತಿಮತ್ ಸಹಲಾ ಪೈಚಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಮತ್ತು ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಸಭಾ ಕಾರ್ಯಕಲಾಪಗಳನ್ನು ಮತ್ತು ಲೆಕ್ಕಪತ್ರವನ್ನು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ರವರು ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹಸೈನಾರ್ ಎ ಕೆ ಕಲ್ಲುಗುಂಡಿ, ನಿರ್ದೇಶಕರುಗಳಾದ ಬಾಪು ಸಾಹೇಬ್ ಎಸ್ಎಂ,ಹಾಜಿ ಮೊಹಿದೀನ್ ಫ್ಯಾನ್ಸಿ, ಆಮಿನ ಎಸ್ ಜಯನಗರ, ಮಹಮದ್ ಹನೀಫ್ ಎಸ್ ಕೆ, ಜಾರ್ಜ್ ಡಿಸೋಜಾ ಕನಿಕರಪಳ್ಳ,ಅಬ್ದುಲ್ ರೆಹಮಾನ್ ಮೇನಾಲ, ಹಾಜಿ ಇಬ್ರಾಹಿಂ ಕತ್ತರ್ ಕೆ ಬಿ, ರಫೀಕ್ ಐವತೊಕ್ಲು, ಮಹಮ್ಮದ್ ಅನ್ಸಾರ್ ಬೆಳ್ಳಾರೆ,ಸಾಜಿದ ಜಿ ಎ ಉಪಸ್ಥಿತರಿದ್ದರು.

ವೇದಿಕೆಗೆ ಬಾರದ ನಿರ್ದೇಶಕ ರಿಯಾಝ್ ಕಟ್ಟೆಕಾರ್ಸ್
ಸಂಘದ ನಿರ್ದೇಶಕರಲ್ಲಿ ಓರ್ವರಾದ ರಿಯಾಝ್ ಕಟ್ಟೆಕ್ಕಾರ್ಸ್ ರವರು ವೇದಿಕೆಗೆ ಬಾರದೆ ಸಭೆಯ ಆರಂಭದಲ್ಲಿ ಕೆಲವು ಸಮಯ ಕೆಳಗೆ ನಿಂತು ಅಲ್ಲಿಂದ ತೆರಳಿದ್ದರು .ಈ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರುಗಳಲ್ಲಿ ಜಿ ಕೆ ಹಮೀದ್ ಮತ್ತು ಅಬ್ದುಲ್ ಗಫಾರ್ ರವರು ಅಧ್ಯಕ್ಷರ ಬಳಿ ಪ್ರಶ್ನಿಸಿ ನಿಮ್ಮಲ್ಲಿ ಏನಾದರೂ ಭಿನ್ನಮತ ಇದೆಯೇ? ಏತಕ್ಕಾಗಿ ರಿಯಾಝ್ ರವರು ವೇದಿಕೆಗೆ ಹತ್ತದೆ ಕುಳಿತರು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಇಕ್ಬಾಲ್ ರವರು ಸಂಘದಲ್ಲಿ ಈ ಬಾರಿ ಚುನಾವಣೆ ಆಗುವಂತೆ ಮಾಡಿದವರೇ ಅವರು. ಅದಾದ ಬಳಿಕ ಸಾಮಾನ್ಯ ಸಭೆಗೂ ಅವರು ಬಂದರೂ,ಕೇವಲ ಸಹಿ ಮಾತ್ರ ಹಾಕಿ ತೆರಳಿದಲ್ಲದೆ ಯಾವುದೇ ಸಭೆಯ ಕಾರ್ಯಕಲಾಪಗಳಲ್ಲಿ ಅವರು ಪೂರ್ಣವಾಗಿ ಭಾಗವಹಿಸಿದೇ ಇಲ್ಲ. ಅವರಿಗೆ ಯಾವ ವಿಷಯದಲ್ಲಿ ಅಸಮಾಧಾನ ಇದೆ ಎಂಬುದು ನಮಗೆ ತಿಳಿದಿಲ್ಲ ಆದ್ದರಿಂದ ಈ ಕುರಿತು ಅವರೇ ಹೇಳಬೇಕಾಗಿದೆ ಅಲ್ಲದೆ ಸಭೆಗೆ ಬಂದ ಸರ್ವ ನಿರ್ದೇಶಕರನ್ನು ವೇದಿಕೆಗೆ ನಾವು ಆಹ್ವಾನಿಸಿದ್ದೇವೆ. ಆದರೆ ಅವರು ಸಭೆಗೆ ಬಂದು ಹೋಗಿರುವುದು ನಮ್ಮ ಗಮನಕ್ಕೆ ಬರಲಿಲ್ಲ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಕಾರ್ಯ ಯೋಜನೆಗಳ ಚರ್ಚೆಗಳು ನಡೆದು ಸಂಘದ ಈಶ್ವರಮಂಗಲ ಶಾಖೆಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಮತ್ತು ಮುಂದಿನ ವರ್ಷಕ್ಕಾಗಿ ಆಡಳಿತ ಮಂಡಳಿಯಿಂದ ಸಿದ್ಧಪಡಿಸಲಾದ ಸಂಘದ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆಯನ್ನು ಪಡೆಯಲಾಯಿತು. ಮುಂದಿನ ವರ್ಷಕ್ಕೆ ಲೆಕ್ಕ ಪರಿಶೋಧಕರ ನೇಮಕಾತಿಯ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಂಘದ ಸದಸ್ಯರುಗಳಿಗೆ ಶೇಕಡ 5.5ರಂತೆ ಡಿವಿಡೆಂಟ್ ನೀಡುವ ಬಗ್ಗೆ ಅಧ್ಯಕ್ಷರು ಸಭೆಗೆ ತಿಳಿಸಿದರು.
ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಸ್ವಾಗತಿಸಿ ಉಪಾಧ್ಯಕ್ಷ ಹಸೈನಾರ್ ಎ ಕೆ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.







