ಸುಳ್ಯದಲ್ಲಿ ಅಡಿಟ‌ರ್ ಮತ್ತು ತೆರಿಗೆ ಸಲಹೆಗಾರರಾದ ಬಾಲಕೃಷ್ಣ ನಡುಗಲ್ಲುರವರ ನೂತನ ಕಚೇರಿ ವಿಸ್ತರಣೆ

0

ಕಳೆದ ಹಲವು ವರ್ಷಗಳಿಂದ ಸುಳ್ಯದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಸಮೀಪದ ಹಿಂದೂಸ್ತಾನ್ ಬಿಲ್ಡಿಂಗ್ ನ ಸುಳ್ಯ ಸೆಂಟರ್ ನ3ನೇ ಮಹಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾನೂನುಬದ್ಧ ಲೆಕ್ಕಪರಿಶೋಧನೆ (Auditing) ಹಾಗೂ ತೆರಿಗೆ ಸಲಹಾ ಸೇವೆಯನ್ನು ನೀಡುತ್ತಾ ಬಂದಿರುವ ಬಾಲಕೃಷ್ಣ ನಡುಗಲ್ಲುರವರ 2ನೇ ಕಚೇರಿ ಗಾಂಧಿನಗರದ ಮಸೀದಿ ಮುಂಭಾಗದ ಶೇರ್ ಬಿಲ್ಡಿಂಗ್ ನ 1ನೇ ಮಹಡಿಯಲ್ಲಿ ಶುಭಾರಂಭಗೊಂಡಿದೆ.

ಇವರ ಕಚೇರಿಯಲ್ಲಿ ಆಡಿಟಿಂಗ್ ಮತ್ತು ಅಕೌಂಟಿಂಗ್, ಜಿಎಸ್‌ಟಿ (GST) ಸೇವೆಗಳು, ಆದಾಯ ತೆರಿಗೆ | (Income Tax), ಯೋಜನಾ ವರದಿಗಳು
(Project Reports), ಕಂದಾಯ ಮತ್ತು ಇ-ಆಡಳಿತ ಸೇವೆಗಳು ಸೇರಿದಂತೆ ಗ್ರಾಹಕರ ಯಾವುದೇ ಸಂಕೀರ್ಣ ತೆರಿಗೆ, ಜಿಎಸ್‌ಟಿ ಅಥವಾ ಲೆಕ್ಕಪತ್ರ ಸಂಬಂಧಿತ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಶಾಶ್ವತ ಮತ್ತು ತ್ವರಿತ ಪರಿಹಾರ ದೊರಕುವುದಾಗಿ ಬಾಲಕೃಷ್ಣ ನಡುಗಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.