ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಆಯುಧ ಪೂಜೆ ಹಾಗೂ ನೂತನ ಇನ್ಸ್‌ಪೈರ್ ಲ್ಯಾಬ್ ಉದ್ಘಾಟನೆ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ: ೧೭-೧೦-೨೦೨೬ರಂದು ಆಯುಧ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ನೂತನವಾಗಿ ಸುಸಜ್ಜಿತಗೊಳಿಸಲಾದ ಇನ್ಸ್‌ಪಾಯರ್ ಲ್ಯಾಬ್‌ನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾದ ಡಾ| ರೇಣುಕಾಪ್ರಸಾದ್ ಕೆ.ವಿ. ಯವರು ಉದ್ಘಾಟಿಸಿದರು. ಕಾಲೇಜಿನ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳ ಲ್ಯಾಬ್‌ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ವಿನ್ಯಾಸದೊಂದಿಗೆ ನವೀಕೃತಗೊಂಡಿದ್ದು ಕಾಲೇಜಿನ ಮೆರುಗನ್ನು ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಕಮಿಟಿ ‘ಬಿ’, ಸುಳ್ಯ ಕಾರ್ಯದರ್ಶಿ, ಡಾ. ಜ್ಯೊತಿ ಆರ್. ಪ್ರಸಾದ್, ನಿರ್ದೇಶಕರಾದ ಡಾ. ಅಭಿಜ್ಞ ಕೆ.ಆರ್., ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಶ್ರೀ ಮೌರ್ಯ ಆರ್. ಕುರುಂಜಿ, ಎ.ಒ.ಎಲ್.ಇ.(ರಿ) ಕಮಿಟಿ ‘ಬಿ’ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಎ.ಒ.ಎಲ್.ಇ(ರಿ) ಕಮಿಟಿ ‘ಬಿ’ ಎಲ್ಲಾ ಸಂಸ್ಥೆಯ ಪ್ರಾಂಶುಪಾಲರುಗಳು, ಸಿಬ್ಬಂದಿಗಳು, ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್ ಆಡಳಿತಾಧಿಕಾರಿ ಶ್ರೀ ಮಾಧವ ಬಿ.ಟಿ., ಎ.ಒ.ಎಲ್.ಇ. ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಡ್ಮಿಶನ್ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಪ್ರದೀಪ್ ಕೆ.ಎನ್. ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಡೀನ್‌ಗಳು ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.