ಮತ್ತೆ ಉಕ್ಕೇರಿದ ಪಯಸ್ವಿನಿ

0
4148

ಕಲ್ಲುಗುಂಡಿ ಮತ್ತು ಪಾಲಡ್ಕದಲ್ಲಿ ರಾಜ್ಯ ಹೆದ್ದಾರಿ ಬಂದ್

p>

ಮನೆಗಳು ಜಲಾವೃತ – ನಿವಾಸಿಗಳ ಸ್ಥಳಾಂತರ

ಸಂಪಾಜೆ, ಕೊಯನಾಡು ಮತ್ತು ಅದಕ್ಕಿಂತಲೂ ಮೇಲ್ಭಾಗದಲ್ಲಿ ವಿಪರೀತಳೆ ಸುರಿದ ಕಾರಣ ನೆರೆ ಸೃಷ್ಟಿ ಯಾಗಿದ್ದು, ಪಯಸ್ವಿನಿ ನದಿ ಮತ್ತೆ ಉಕ್ಕಿ ಹರಿಯತೊಡಗಿದೆ. ನಿನ್ನೆಯಷ್ಟೆ ಜಲಪ್ರಳಯಕ್ಕೆ ಒಳಗಾಗಿದ್ದ ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ಇಂದು ಪುನಹ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.

 

ಕಲ್ಲುಗುಂಡಿಯಲ್ಲಿ , ಗೂನಡ್ಕದಲ್ಲಿ ಮನೆಗಳು ಜಲಾವೃತವಾಗಿದ್ದು ರಾಜ್ಯ ಹೆದ್ದಾರಿ ಬಂದ್ ಆಗಿದೆ. ಕೆಲವು ಮನೆಗಳವರನ್ನು ಸಚಥಳಾಂತರ ಮಾಡಲಾಗಿದೆ.


ಅದರಂತೆ ಅರಂಬೂರು ಬಳಿಯ ಪಾಲಡ್ಕದಲ್ಲೂ ಆಗಿದೆ. ಪಯಸ್ವಿನಿ ಉಕ್ಕೇರಿ ಬಂದು ರಾಜ್ಯ ಹೆದ್ದಾರಿ ಮುಳುಗಡೆಯಾಗಿದೆ. ವಾಹನ ಸಾಗಲು ಅಸಾಧ್ಯವಾಗಿ ರಸ್ತೆ ಬಂದ್ ಆಗಿದೆ.

ನದಿ ಬದಿಯ ಮನೆಗಳು ಜಲಾವೃತವಾಫ ಹಿನ್ನೆಲೆಯಲ್ಲಿ ಆ ಮನೆಗಳವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

 

LEAVE A REPLY

Please enter your comment!
Please enter your name here