ಪ್ರವೀಣ್ ಹಂತಕರನ್ನು ಶೀಘ್ರವಾಗಿ ಬಂಧಿಸಿದ ಪೋಲೀಸ್ ಇಲಾಖೆಯ ಕೆಲಸ ಅಭಿನಂದನಾರ್ಹ: ವೆಂಕಟ್ ವಳಲಂಬೆ

0

 

ಬೆಳ್ಳಾರೆಯಲ್ಲಿ ನಡೆದ ದುಘ೯ಟನೆ ಖೇಧಕರವಾದುದು.ಇಂತಹ ಘಟನೆಗಳು ಮರುಕಳಿದಂತೆ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅತ್ಯಗತ್ಯ. ನೈಜ ಕೊಲೆಗಡುಕರನ್ನು ಶೀಘ್ರವಾಗಿ ಬಂಧಿಸಿದ ಪೋಲೀಸ್, ವರಿಷ್ಠಾಧಿಕಾರಿಗಳು,ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ.

ಅತೀ ಶೀಘ್ರವಾಗಿ ನೈಜ ಆರೋಪಗಳನ್ನು ಬಂದಿಸಲು ಶೀಘ್ರ ಕಾರ್ಯಪ್ರವೃತ್ತರಾಗಿ ಸಫಲರಾದ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಾಣೆ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನ ಸಲ್ಲಿಬೇಕು, ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಸುಬ್ರಹ್ಮಣ್ಯದಲ್ಲಿ ಆ.11 ರಂದು ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದರು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯನಾಗಿ, ಸ್ವಯಂಸೇವಕನಾಗಿ, ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಾಡಿಗೆ ಆಘಾತ ತಂದಿದೆ. ಹಿಂದೂ ಬಂಧುಗಳಿಗೆ ಇದು ಆತಂಕ ತಂದೊಡ್ಡಿತ್ತು ಎಂದರು.

ದುರ್ಘಟನೆ ಆದ ತಕ್ಷಣ ಸರಕಾರವು ಇಂತಹ ಘೋರ ಕೃತ್ಯವನ್ನು ತಡೆಯುವಲ್ಲಿ ಮತ್ತು ಹಿಂದೂ ಸಮಾಜದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ತಕ್ಷಣವೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ನೇಮಿಸಿ ತನಿಖೆಯ ಶೀಘ್ರತೆಗೆ ಒತ್ತು ನೀಡಿದೆ.ಪ್ರಕರಣವನ್ನು ಎನ್ ಐ ಎ ಗೆ ಒಪ್ಪಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಅಲ್ಲದೆ ಹಿಂದೂ ಸಮಾಜಕ್ಕೆ ಆತ್ಮ ಸ್ಥೈರ್ಯ ತುಂಬಿದೆ ಎಂದು ಹೇಳಿದರು.
ಪ್ರವೀಣರ ಮನೆಗೆ ಸ್ವತಾಃ ಮುಖ್ಯಮಂತ್ರಿ ಗಳು ಆಗಮಿಸಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಸಚಿವರಾದ ಎಸ್.ಅಂಗಾರ, ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಆಗಮಿಸಿ ಪ್ರವೀಣರ ಮನೆಯವರಿಗೆ ಧೈರ್ಯ ತುಂಬಿದ್ದಾರೆ ಎಂದು ನುಡಿದರು.
ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ಗಲ್ಲು ಶಿಕ್ಷೆ ಆಗಬೇಕು.
ಜಿಹಾದಿಗಳು ಬಂದು ಈ ರೀತಿ ಕೃತ್ಯ ಮಾಡಿರುವುದು ಆಘಾತ ತಂದಿದೆ.ಎಸ್ ಡಿ ಪಿ ಐ ಮೊದಲಾದ
ಸಂಘಟನೆಗಳನ್ನು ಕಟ್ಟು ನಿಟ್ಟಿನ ಕ್ರಮದೊಂದಿಗೆ ನಿರ್ಬಂಧ ಮಾಡಬೇಕು.ಇಂತಹ ಜಿಹಾದಿ ಶಕ್ತಿಗಳನ್ನು ಗುರುತಿಸಿ ಪೋಲೀಸ್ ಇಲಾಖೆ ಶೀಘ್ರ ಮಟ್ಟ ಹಾಕಬೇಕು.
ಜನತೆ ಜಿಹಾದಿಗಳ ಬಗ್ಗೆ ಜಾಗೃತೆ ವಹಿಸಬೇಕು.ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುವಲ್ಲಿ ಜಿಹಾದಿ ಶಕ್ತಿಗಳು ತಲ್ಲೀನರಾಗಿದ್ದಾರೆ.ಜನತೆ ಈ ಬಗ್ಗೆ ಜಾಗೃತೆ ವಹಿಸಬೇಕು ಎಂದು ನುಡಿದರು.
ನಮ್ಮ ಸುತ್ತ ಮುತ್ತಲಿನವರೆ ಕೃತ್ಯ ಎಸಗಿರುವುದು ಆಘಾತ ತಂದಿದೆ.
ಪ್ರತಿಯೊಂದು ಗ್ರಾಮದಲ್ಲಿ ಜನತೆ ಜಾಗೃತರಾಗಬೇಕು.
ಸದೃಡ ಸಮಾಜ ನಿರ್ಮಾಣಕ್ಕೆ ಸರ್ವರು ಕರ ಜೋಡಿಸಬೇಕು.
ಹಿಂದು ಸಂಘಟನೆ ಶಾಂತಿ ನೆಮ್ಮದಿಗೆ ಪ್ರಾಶಸ್ತ್ಯ ನೀಡುತ್ತದೆ .ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ
ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಳ, ಸುಬ್ರಹ್ಮಣ್ಯ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ಬಿಜೆಪಿ ಗಾಮ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಮಂಡಲ ಸಮಿತಿ ಸದಸ್ಯ ಚಿದಾನಂದ ಕಂದಡ್ಕ, ಪ್ರಮುಖ ರಾದ ಅಚ್ಚುತ ಗೌಡ ಉಪಸ್ಥಿತರಿದ್ದರು.