10 ದಿನಗಳ ಬಳಿಕ ಬಾಳುಗೋಡಿಗೆ ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಆರಂಭ

0

 

ಆ.1 ರ ಮಳೆಯಿಂದ ಹರಿಹರ ಪಲ್ಲತಡ್ಕದಿಂದ ಬಾಳುಗೋಡು ಸಂಚಾರ ಸ್ಥಗಿತಗೊಂಡು ವಾರದ ಬಳಿಕ ಸಂಚಾರ ಆರಂಭವಾದರೂ ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಆರಂಭವಾಗಿರಲಿಲ್ಲ.

ಬಾಳುಗೋಡಿನ ಜನತೆಯ ದೂರಿನಂತೆ ಹರಿಹರ ಗ್ರಾ.ಪಂ ವತಿಯಿಂದ ಕೆ ಎಸ್ ಆರ್ ಟಿ ಸಿ ಗೆ ಪತ್ರ ಬರದಿದ್ದರು. ನಿನ್ನೆ ದಿನ ಕೆ ಎಸ್ ಆರ್ ಟಿ ಸಿ ಪುತ್ತೂರು ಡಿಪೋದ ಅಧಿಕಾರಿಗಳು ಬಂದು ರಸ್ತೆ ಪರಿಶೀಲನೆ ನಡೆಸಿದ್ದು ಹರಿಹರ ಪಲ್ಲತಡ್ಕ ಸೇತುವೆ ಬಳಿ ಕೆಲಸ ಪೂರ್ಣಗೊಂಡಲ್ಲಿ ಸಂಚಾರ ಪುನಾರಾರಂಭಿಸುವ ಸೂಚನೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಬಾಳುಗೋಡಿನ ಕೆಲವರು ತಾತ್ಕಾಲಿಕ ತಡೆ ಗೋಡೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದು ಕೆಲಸ ಪೂರ್ಣಗೊಳಿಸುವಂತೆ ತಾಕಿತು ಮಾಡಿದ್ದರೆನ್ನಲಾಗಿದೆ. ಇಂದು ಕೆಲಸ ಪೂರ್ಣಗೊಂಡಿದ್ದು ಇಂದು ಸಂಜೆ ಕೆ ಎಸ್ ಆರ್ ಟಿ ಸಿ ಬಸ್ ಬಾಳುಗೋಡಿಗೆ ತೆರಳಿರುವುದಾಗಿ ತಿಳಿದು ಬಂದಿದೆ.