ಪ್ರವೀಣ್ ನೆಟ್ಟಾರು ರವರ ಹತ್ಯೆ ಘಟನೆಗೆ ಸಂಬಂಧಿಸಿ ಎಲಿಮಲೆ ಜುಮಾ ಮಸ್ಜಿದ್ ಆಡಳಿತ ಕಮಿಟಿಯಿಂದ ಖಂಡನೆ

0

 

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಕರಣದಲ್ಲಿ ನಮ್ಮ ಮಸೀದಿಯ ವ್ಯಾಪ್ತಿಯ ಬಶೀರ್ ಎಂಬಾತ ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಎಲಿಮಲೆ ಬದ್ರಿಯಾ ಜಮಾತ್ ಕಮಿಟಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.


ಇಸ್ಲಾಂ ಧರ್ಮವಾಗಲಿ ಯಾವ ಧರ್ಮದಲ್ಲೂ ಇಂತಹ ಕೃತ್ಯ ಮಾಡಲು ತಿಳಿಸಿರುವುದಿಲ್ಲ. ಸದ್ರಿ ಆರೋಪಿಗಳು ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಕಾನೂನು ಪ್ರಕಾರ ಕ್ರಮಕೈಗೊಂಡು ಕಠಿಣ ಶಿಕ್ಷೆ ನೀಡಲು ಪೊಲೀಸ್ ಇಲಾಖೆಯನ್ನು ನಮ್ಮ ಜಮಾಅತ್ ಸಮಿತಿ ಒತ್ತಾಯಿಸುತ್ತದೆ.
ಸಮಾಜದಲ್ಲಿ ಇಂತಹ ಕೃತ್ಯ ನಡೆಯದಂತೆ ಹಾಗೂ ಶಾಂತಿ ಸೌಹಾರ್ದತೆ,ಸಾಮರಸ್ಯತೆಯನ್ನು ಸ್ಥಾಪಿಸಲು ಸಮಾಜ ಬಾಂಧವರೆಲ್ಲರೂ ಒಂದಾಗಿ ಈ ಸಂದರ್ಭದಲ್ಲಿ ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ.ಅದಕ್ಕೆ ನಮ್ಮ ಜಮಾತ್ ಸಮಿತಿಯು ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದೇವೆ. ಎಂದು ಎಲಿಮಲೆ ಮಸೀದಿಯ ಜಮಾತ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆ  ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.