ದುಗ್ಗಲಡ್ಕ; ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮೆರವಣಿಗೆ -ಮಾನವ ಸರಪಳಿ

0

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದುಗ್ಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾರ್ವಜನಿಕರ ಸಹಯೋಗದಲ್ಲಿ ಮಾನವ ಸರಪಳಿ ದುಗ್ಗಲಡ್ಕ ಪೇಟೆಯಲ್ಲಿ ಇಂದು ನಡೆಯಿತು.

ದುಗ್ಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯ ಮೂಲಕ ಸಾಗಿ ಬಂದರು. ದುಗ್ಗಲಡ್ಕ ಪೇಟೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಮಾನವ ಸರಪಳಿ ನಿರ್ಮಿಸಲಾಯಿತು.ಸ್ವಾತಂತ್ರ್ಯದ ಘೋಷಣೆ ಕೂಗಲಾಯಿತು.
ಕಾರ್ಯಕ್ರಮಕ್ಕೆ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಪಿ. ನೇತೃತ್ವ ವಹಿಸಿ ಮಾತನಾಡಿದರು. ನ.ಪಂ. ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ಶಿಕ್ಷಕ ವೃಂದದವರು,ವರ್ತಕರು,ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here