ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಕ್ರೀಡಾಕೂಟ

0

 

 

ಸ್ವಾತಂತ್ರ್ಯತ್ಸೋವದ ಅಮೃತಮಹೋತ್ಸವದ ಪ್ರಯುಕ್ತ ಆ. 13ರಂದು ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಸ್ಥೆಯ ಉದ್ಯೋಗಿಗಳಿಗೆ ವಾಲಿಬಾಲ್, ತ್ರೋಬಾಲ್, ಪುರುಷರ ಮತ್ತು ಮಹಿಳೆಯರ ವಿಭಾಗದ ಹಗ್ಗಜಗ್ಗಟ ಕ್ರೀಡಾಕೂಟ ನಡೆಯಿತು. ಅಕಾಡೇಮೆ ಅಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ.ವಿ ಚಿದನಾಂದ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಡೀನ್ ಡಾ. ನಿಲಾಂಬಿಕೈ ನಟರಾಜನ್, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಲೀಲಾದರ್ ಡಿ.ವಿ, ಎನ್.ಎಂ.ಪಿ.ಯು.ಸಿ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು. ತಿರ್ಥೇಶ್ ಪಾರೆಪ್ಪಾಡಿ ಸ್ವಾಗತಿಸಿ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

*ಸಮಾರೋಪ ಸಮಾರಂಭ*

 

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ ಸದಸ್ಯರಾದ ಡಾ. ಐಶ್ವರ್ಯ ಕೆ.ಸಿ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಡಾ ನಂದಕಿಶೋರ್, ಶ್ರೀಮತಿ ಕೌಶಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯ ವಿಜೇತರು

 

 ವಾಲಿಬಾಲ್ : ವಿನ್ನರ್ ಕೆ ವಿ ಜಿ ಮೇಡಿಕಾಲ್ ಕಾಲೇಜು ರನ್ನರ್ ಆಯುರ್ವೇದ ವಿದ್ಯಾಲಯ ,

 

ತ್ರೋಬಾಲ್ :ವಿನ್ನರ್ ಕೆ ವಿ ಜಿ ಮೇಡಿಕಾಲ್ ಕಾಲೇಜು ರನ್ನರ್ ಆಯುರ್ವೇದ ವಿದ್ಯಾಲಯ

 

ಹಗ್ಗಜಗ್ಗಟ ಪುರುಷರ ವಿಭಾಗ : ವಿನ್ನರ್ ಮೇಡಿಕಲ್ ಕಾಲೇಜು ,ರನ್ನರ್ ಎನ್ ಎಂ ಸಿ 

 

ಹಗ್ಗಜಾಗ್ಗಟ ಮಹಿಳೆಯರ ವಿಭಾಗ : ವಿನ್ನರ್ ಆಯುರ್ವೇದ ವಿದ್ಯಾಲಯ ರನ್ನರ್ ಕೆ ವಿ ಜಿ ನರ್ಸಿಂಗ್ ಇನ್ಸ್ಟ್ಯೂಟ್ ಪ್ರಶಸ್ತಿಯನ್ನು ಪಡೆದುಕೊಂಡರು ತಿರ್ಥೇಶ್ ಪಾರೆಪ್ಪಾಡಿ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿದರು, ತಿರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಕ್ರೀಡಾಪಟುಗಳು, ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here