ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್; ಅವನಿ ಎಂ.ಎಸ್.ರಾಷ್ಟ್ರಮಟ್ಟಕ್ಕೆ ಆಯ್ಕೆ

0

 

ಅಗಸ್ಟ್ 20,21,2022 ರಂದು ಬೆಂಗಳೂರಿನ ಡಾ. ರಾಜಕುಮಾರ್ ಗ್ಲಾಸ್ ಹೌಸ್ ಬಿಬಿಎಂಪಿ ಇಲ್ಲಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಅವನಿ ಎಂ.ಎಸ್.ಭಾಗವಹಿಸಿ ರಾಷ್ಟ್ರಮಟ್ಟಕ್ಜೆ ಆಯ್ಕೆಯಾಗಿದ್ದಾರೆ.

9 ರಿಂದ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ನಡೆದ ರಾಜ್ಯಮಟ್ಟದ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಅವನಿ ಎಂ.ಎಸ್ .ಸುಳ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

9 ರಿಂದ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ರಾಜ್ಯಮಟ್ಟದ ಟ್ರೆಡಿಶನಲ್ ಯೋಗಸನ ಸ್ಪರ್ಧೆಯಲ್ಲಿ 4 ನೇ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ರೇಶ್ಮಾ ಮತ್ತು ಶಶಿಧರ ಮೋಂಟಡ್ಕ ಇವರ ಪುತ್ರಿ.