ಶ್ರೀ ರಾಮಕೃಷ್ಣ ಸೊಸೈಟಿ:28 ನೇ ವಾರ್ಷಿಕ ಮಹಾಸಭೆ

0

ರೂ. 9.೦4 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ 

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ೨೮ನೇ ವಾರ್ಷಿಕ ಮಹಾಸಭೆ, ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಉರ್ವ ಸೆಂಟನರಿ ಚರ್ಚ್ ಹಾಲ್‌ನಲ್ಲಿ ಆ.28  ರಂದು ಜರಗಿತು.
ಸಂಘವು 31.೦3.2022 ಕ್ಕೆ ಅಂತ್ಯವಾದ,2021-22 ನೇ ಸಾಲಿನಲ್ಲಿ ರೂ.9.೦4ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25  ಡಿವಿಡೆ೦ಡ್‌ನ್ನು ನೀಡಲು ಮಹಾಸಭೆಯು ನಿರ್ಧರಿಸಿದೆ.
2021-22 ನೇ ಸಾಲಿನಲ್ಲಿ ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ರೂ. 130 ಕೋಟಿ ವೃದ್ಧಿಯನ್ನು ದಾಖಲಿಸಿದೆ.ಸ್ಥಾಪನೆಯ ೨೮ನೇ ವರ್ಷದಲ್ಲಿ ರೂ.722  ಕೋಟಿ ಮೀರಿದ ಒಟ್ಟು ವ್ಯವಹಾರದ (ಠೇವಣಿ + ಸಾಲ) ಮೈಲಿಗಲ್ಲುಗಳನ್ನು ದಾಟಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ೦ ಪ್ರಪ್ರಥಮ ಕ್ರೆಡಿಟ್ ಕೋ-ಓಪರೇಟಿವ್ ಸಂಘವಾಗಿ ಮೂಡಿಬಂದಿದೆ ಹಾಗೂ ೫ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಸಂಘದ ಜಿoಜಿಟ್ಞ 2025  ರಂತೆ 31.೦3.2025 ಕ್ಕೆ ರೂ.1,೦೦೦ ಕೋಟಿ ಒಟ್ಟು ವ್ಯವಹಾರವನ್ನು ಹಾಗೂ 3೦ ಶಾಖೆಗಳನ್ನು ಹೊಂದುವ ಗುರಿಯನ್ನು ಸಾಧಿಸುವತ್ತ ದೃಢ ಹೆಜ್ಜೆಯನ್ನು ಇಟ್ಟುಕೊಂಡು, ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದೆ.ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. ೦.೦5 ಗೆಸೀಮಿತವಾಗಿದ್ದು,ಕಳೆದ ೧೫ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ. ಸಂಘದ ಕೇಂದ್ರ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು 2024 ನೇ ಸಾಲಿನಾಂತ್ಯಕ್ಕೆ ಪೂರ್ತೀಕರಿಸಲುಉzಶಿಸಲಾಗಿದೆಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈ ರವರು ಸಭೆಗೆ ತಿಳಿಸಿದರು.
ಪ್ರಭಾರ ಮಹಾಪ್ರಬ೦ಧಕ ಶ್ರೀ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್‌ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಿಸಿದರು.
ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಂಘದ ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರುರವರನ್ನು ಪತ್ನಿ ಶ್ರೀಮತಿ ಕಸ್ತೂರಿಕಲಾ ಎಸ್. ರೈಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
೨೦೨೧-೨೨ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು. ಸ್ಥಾಪಕಾಧ್ಯಕ್ಷ ದಿ| ಕೆ.ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರವನ್ನು, ೨೦೨೧-೨೨ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಿದ ಮಂಗಳೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ವರದಾಕ್ಷಿ ಶೆಟ್ಟಿಯವರ ಪುತ್ರ ಅಭಿಶೇಕ್ ಶೆಟ್ಟಿ(ಶೇ. ೯೫.೬೮) ಮತ್ತು ಮುಡಿಪು ಶಾಖೆಯ ವ್ಯವಸ್ಥಾಪಕರಾದ ತಿಮ್ಮಯ್ಯ ಶೆಟ್ಟಿ ಮತ್ತು ಶ್ರೀಮತಿ ಆಶಲತಾ ಶೆಟ್ಟಿಯವರ ಪುತ್ರಿ ಜಾಗೃತಿ ಟಿ. ಶೆಟ್ಟಿ(ಶೇ. ೯೪.೪೮)ಯವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸ೦ಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರಾದ ಶ್ರೀಮತಿ ಎ. ರತ್ನಕಾ೦ತಿ ಶೆಟ್ಟಿ, ಕೆ. ಸೀತಾರಾಮ ರೈ ಸವಣೂರು, ಡಾ ಕೆ.ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್. ಅಡ್ಯ೦ತಾಯ, ಸಿಎ ಎಚ್. ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ,ಶ್ರೀ ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ. ಎ೦. ಸುಧಾಕರ ಶೆಟ್ಟಿ ಮತ್ತು ಅರಿಯಡ್ಕ ಚಿಕ್ಕಪ್ಪ ನಾಕ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಯಂ.ರಾಮಯ ಶೆಟ್ಟಿ ವ೦ದಿಸಿದರು. ಸಿಬ್ಬ೦ದಿಗಳಾದ ಶ್ರೀಮತಿ ಅಶ್ವಿನಿ ಡಿ. ರೈ ಪ್ರಾರ್ಥಿಸಿದರು, ಧನಂಜಯ್ ಕುಮಾರ್ ಮತ್ತು ಶ್ರೀಮತಿ ಕೌಸ್ತುಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಹುಸಂಖ್ಯೆಯಲ್ಲಿ ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.