ಆ.31: ಉಬರಡ್ಕದಲ್ಲಿ ಸಾರ್ವಜನಿಕ ಗಣೇಶೋತ್ಸವ

0

 

ಸಂಜೆ ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಯಕ್ಷ-ನಾಟ್ಯ-ವೈಭವ

ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಉಬರಡ್ಕ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಸಾರ್ವಜನಿಕ ಗಣಪತಿ ಹೋಮ, ಸ್ಥಳೀಯರಿಂದ ಭಜನೆ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಸ್ವರ ಯಕ್ಷ -ನಾಟ್ಯ – ವೈಭವ ನಡೆಯಲಿದೆ. ನಂತರ ಡಿ ಯುನೈಟೆಡ್ ಡಾನ್ಸ್ ಸ್ಟುಡಿಯೋ ಸುಳ್ಯ ಇವರಿಂದ ನೃತ್ಯ ವೈಭವ ನಡೆಯಲಿದೆ.
ಸೆ.1 ರಂದು ಬೆಳಿಗ್ಗೆ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಬ್ಯಾಂಡು ವಾಲಗ ಸಿಡಿಮದ್ದುಗಳೊಂದಿಗೆ ಶ್ರೀ ಗಣೇಶನ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ನಡೆಯಲಿದೆ.