ಪಂಜ:ಅಳ್ಪೆ ಚಿಂಗಾಣಿಗುಡ್ಡೆ ದೈವಸ್ಥಾನದಲ್ಲಿ ಭಕ್ತಿ ಸಡಗರದ ನೇಮೋತ್ಸವ

0

ಶ್ರೀ ಉಳ್ಳಾಕುಲು ದೈವದ ನೇಮ

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ,ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇದರ ವಾರ್ಷಿಕ ತಂಬಿಲ ಮತ್ತು ನೇಮೋತ್ಸವ ಎ.22 ರಿಂದ ಎ23 ರಾತ್ರಿ ತನಕ ಜರುಗಲಿದೆ.

ಎ.23. ರಂದು ಬೆಳಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ, ಶ್ರೀ ಉಳ್ಳಾಕುಲು ದೈವದ ನೇಮ ಭಕ್ತಿ ಸಡಗರರೊಂದಿಗೆ ನಡೆಯಿತು.
ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ಜರುಗಲಿದೆ.

ಸಂಜೆ ಗಂಟೆ 3 ರಿಂದ ಶ್ರೀ ಕುಪ್ಪೆ ಪಂಜುರ್ಲಿ ದೈವ ಮತ್ತು ಶ್ರೀ ಗುಳಿಗ ದೈವದ ನೇಮ, ರಾತ್ರಿ ಗಂಟೆ 8ರಿಂದ ಪರಿವಾರ ದೈವಗಳ ಮತ್ತು ಶ್ರೀ ಧರ್ಮ ದೈವ ರುದ್ರ ಚಾಮುಂಡಿ ದೈವದ ನೇಮ ಜರುಗಲಿದೆ.

ಎ.22.ರಂದು ಮುಂಜಾನೆ ವಾರ್ಷಿಕ ತಂಬಿಲ, ಸಂಜೆ ಭಂಡಾರ ತೆಗೆಯುವುದು, ಭಜನಾ ಕಾರ್ಯಕ್ರಮ, ಅನ್ನಸಂಪರ್ಪಣೆ, ರಾತ್ರಿ ಶ್ರೀ ಅರಸು ಉಳ್ಳಾಕುಲು ,ಶ್ರೀ ಮಹಿಷಂತಾಯ, ಶ್ರೀ ಮಣಿಪಾನ ಪಂಜುರ್ಲಿ ದೈವಗಳ ನೇಮ ನಡೆಯಿತು.