ಮೇ 1- 3: ಅಲೆಕ್ಕಾಡಿ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ

0

ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಿಲ್ಲವ ಅಮೀನ್ ಬರಿಯ ತರವಾಡಿನಲ್ಲಿ ಮೆ.1 ರಿಂದ ಮೇ.3 ರ ತನಕ ಪುತ್ತೂರು ಕೊಟ್ಯ ಶ್ರೀ ಧೂಮವತಿ ಕ್ಷೇತ್ರದ ಮುಖ್ಯಸ್ಥರು ಹಾಗೂ ದೈವಗಳ ಪ್ರಧಾನ ಕರ್ಮಿ ಯಾಗಿರುವ ನಾರಾಯಣ ಪೂಜಾರಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಂತೆ ಅಲೆಕ್ಕಾಡಿ ತರವಾಡು ಶ್ರೀ ವನದುರ್ಗಾದೇವಿ ಮತ್ತು ಶ್ರೀ ಧರ್ಮ ದೈವ ದೂಮಾವತಿ ಹಾಗೂ ಸಹ ಪರಿವಾರ ದೈವಗಳ ಸೇವಾ ಸಮಿತಿ ವತಿಯಿಂದ ಶ್ರೀ ದೈವಗಳ ನೇಮೋತ್ಸವವು ನಡೆಯಲಿರುವುದು. ಮೇ. 1 ರಂದು ಬೆಳಿಗ್ಗೆ ಗಣಪತಿ ಹೋಮ, ಮೂಲ ನಾಗ ತಂಬಿಲ, ವೆಂಕಟ್ರಮಣ ದೇವರ ಹರಿ ಸೇವೆ, ಶ್ರೀ ವನದುರ್ಗಾ ದೇವಿಗೆ ಸರ್ವಾಲಂಕಾರ ಮಹಾ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಸಂಜೆ ದೈವ ಸಾನಿಧ್ಯದಲ್ಲಿ ದೀಪ ಪ್ರತಿಷ್ಠೆ ಬಳಿಕ ಶ್ರೀ ದೈವಗಳ ಭಂಡಾರ ಇಳಿಯುವುದು, ಕೋಲೋತ್ಸವ ಪ್ರಸಾದ ಬೋಜನ, ಮೇ 2 ರಂದು ಸಂಜೆಯ ಬಳಿಕ ಬೆಳಗ್ಗೆ ತನಕ ಸಹ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮೆ 3 ರಂದು ಬೆಳಗ್ಗೆ ಧರ್ಮ ದೈವ ಧೂಮವತಿ ನೇಮೋತ್ಸವ, ಮಧ್ಯಾಹ್ನ ಗಂಧ ಪ್ರಸಾದ, ಮಹಾ ಅನ್ನ ಸಂತರ್ಪಣೆ ಅದೇ ದಿನ ರಾತ್ರಿ 8 ಗಂಟೆಯ ಬಳಿಕ ಕೊರಗಜ್ಜ ದೈವದ ಕೊಲೋತ್ಸವ, ಪ್ರಸಾದ ಭೋಜನ ನಡೆಯಲಿರುದೆಂದು ಸಮಿತಿಯವರು ತಿಳಿಸಿದ್ದಾರೆ.