ಸಂಪಾಜೆ : 28 ನೇ ವರ್ಷದ ಗೌರಿ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸಂಪಾಜೆ ಹಾಗೂ ಪಯಸ್ವಿನಿ ಯುವಕ ಸಂಘ(ರಿ) ಸಂಪಾಜೆ ಕೊಡಗು ಸಂಯುಕ್ತ ಆಶ್ರಯದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 28 ನೇ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ  ಆ.30 ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ ನಡೆದು ಗೌರಿ ಪ್ರತಿಷ್ಠಾಪನೆಯ ನಂತರ ಪೂಜಾ ವಿಧಿ ವಿಧಾನಗಳು ನಡೆದ ನಂತರ ಪುರುಷರ ಹಾಗೂ ಮಹಿಳೆಯ ಕೆಸರು ಗದ್ದೆ ಹಗ್ಗಜಗ್ಗಾಟ ಮತ್ತು ಅಟ್ಟಿಮಡಿಕೆ ಕ್ರೀಡಾಕೂಟ ನಡೆಯಿತು.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ನಾಗಶ್ರೀ ಸುಳ್ಯ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಶ್ರೀ ಆಂಜನೇಯ ಸಂಪಾಜೆ ಬೈಲು ಪಡೆದುಕೊಂಡಿತು. ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಮತ್ತು ದ್ವಿತೀಯ ಸ್ಥಾನವನ್ನು ಶ್ರೀ ಮಹಾಲಿಂಗೇಶ್ವರ ಪುತ್ತೂರು ಎ ಮತ್ತು ಬಿ ತಂಡವು ಪಡೆದು ಕೊಂಡಿತು. ಅಟ್ಟಿಮಡಿಕೆ ಕ್ರೀಡಾಕೂಟದಲ್ಲಿ ದಬ್ಬಡ್ಕ ಮಿತ್ರ ಬಳಗದವರು ಪಡೆದುಕೊಂಡಿತು. ಸಂಜೆ 6 ಗಂಟೆಯ ನಂತರ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 9 ಗಂಟೆಗೆ ಸರಿಯಾಗಿ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಆ.31 ರಂದು ಶ್ರೀ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ  ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.