ಬೆಳ್ಳಾರೆ : ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ

0

 

 

ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ಶ್ರೀ ಗಣೇಶೋತ್ಸವ

ಧರ್ಮ,ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕು – ರಾಜಶೇಖರಾನಂದ ಸ್ವಾಮೀಜಿ


ಗಣಪತಿಯನ್ನು ಎಲ್ಲಾ ಕಡೆ ಜನರು ಆರಾಧಿಸುತ್ತಾರೆ.
ಶುಭ ಕಾರ್ಯಗಳಲ್ಲಿ ಮೊದಲ ಪೂಜೆ ಗಣಪತಿಗೆ ನಡೆಯುತ್ತದೆ.
ದೈವಾರಾಧನೆಯಲ್ಲೂ ಮೊದಲು ಗಣಪತಿಗೆ ಸುತ್ತಿಗೆ ಇಡುತ್ತಾರೆ.ಇದು ಹಿಂದೂ ಧರ್ಮದ ಸಂಸ್ಕೃತಿಯಾಗಿದೆ.
ಮಕ್ಕಳಲ್ಲಿ ಧರ್ಮ,ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಬೆಳ್ಳಾರೆ ಸಾರ್ವಜನಿಕ ಸಾಂಸ್ಕೃತಿಕ ಸಮಿತಿ, ವಿರಾಟ್ ಫ್ರೆಂಡ್ಸ್ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರಾತ್ರಿ ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಮಕ್ಕಳ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು.ಸಂಬಂಧವನ್ನು ಗಟ್ಟಿಮಾಡಬೇಕು.ಮಾತೃಸಮಾಜ ಗಟ್ಟಿಯಾದರೆ ಹಿಂದೂ ಸಮಾಜಕ್ಕೆ ಕೊರತೆ ಇಲ್ಲ ಎಂದು ಅವರು ಹೇಳಿದರು.

*ಸಾಧಕರಿಗೆ ಸನ್ಮಾನ*

ಗಣಪತಿ ಮೂರ್ತಿ ರಚನೆ ಮಾಡಿದ ಐತ್ತ ಪಾಟಾಜೆ,ಬೆಳ್ಳಾರೆ ಗ್ರಾ.ಪಂ.ಘನತ್ಯಾಜ್ಯ ಘಟಕದ ವಾಹನದ ಚಾಲಕರಾದ ಸಂಜೀವಿನಿ‌ ಒಕ್ಕೂಟದ ಶ್ರೀಮತಿ ಸವಿತಾ, ಎಂ.ಬಿ.ಕೆ.ಶ್ರೀಮತಿ ಗೀತಾ ಪ್ರೇಮ್, ವಿರಾಟ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಲಕ್ಷ್ಮೀಕಾಂತ್ ಹೆಗಡೆ,ಆಂಬ್ಯುಲೆನ್ಸ್ ಚಾಲಕ ಶಿವ ಮಣಿಯಾಣಿ ಯವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಗಣೇಶೋತ್ಸವಕ್ಕೆ ಸಹಕಾರ ನೀಡಿದ ವಿವಿಧ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಮತಿ‌ ಸುಹಾನ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ , ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸುನಿಲ್ ರೈ ಪುಡ್ಕಜೆ, ನಿವೃತ್ತ ತೆರಿಗೆ ಅಧಿಕಾರಿ ರಾಮಕೃಷ್ಣ ಭಟ್ ಕುರುಂಬುಡೇಲು , ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಮನೋಜ್ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ವಿರಾಟ್ ಫ್ರೆಂಡ್ಸ್ ಗೌರವಾಧ್ಯಕ್ಷ ಮಿಥುನ್ ಶೆಣೈ ಸ್ವಾಗತಿಸಿ, ತನುಷಾ ಪಡ್ಪು ಪ್ರಾರ್ಥಿಸಿ, ಜಯರಾಮ ಉಮಿಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ,ಕಾರ್ಯದರ್ಶಿ ಧೀರಜ್ ವಂದಿಸಿದರು.
ಸಭಾ ಕಾರ್ಯಕ್ರಮ ನಡೆದ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ತುಳು ಯಕ್ಷಗಾನ ಬಯಲಾಟ “ಅಜ್ಜ ಅಜ್ಜ ಕೊರಗಜ್ಜ” ನಡೆಯಿತು.