ಸಂಪಾಜೆ ಮತ್ತು ಚೆಂಬುನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಭೆ, ಗ್ರಾಮ ಸಮಿತಿ ರಚನೆ

0

ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕದ ವತಿಯಿಂದ ಅಡಿಕೆ ಎಲೆ ಹಳದಿ ರೋಗದ ಸ್ವಯಂಘೋಷಿತ ಅರ್ಜಿ ವಿತರಿಸುವ ಬಗ್ಗೆ ಸಭೆ ಆ. ೨೭ರಂದು ನಡೆಯಿತು.


ಸಭಾಧ್ಯಕ್ಷತೆಯನ್ನು ಶ್ರೀನಿವಾಸ ನಿಡಿಂಜಿ ವಹಿಸಿದ್ದರು. ಸುಳ್ಯ ತಾಲೂಕು ರೈತ ಘಟಕದ ಕಾರ್ಯದರ್ಶಿ ಭರತ್ ಕುಮಾರ್ ಕೆ ಸ್ವಾಗತಿಸಿ ಸ್ವಯಂಘೋಷಿತ ಅರ್ಜಿಯ ಮಾಹಿತಿ ನೀಡಿದರು. ಅತಿಥಿಗಳಾಗಿ ತೀರ್ಥರಾಮ ಪರ್ನೋಜಿ ಹಾಗೂ ಲೋಲಜಾಕ್ಷ ಭೂತಕಲ್ಲು ಮಾತನಾಡಿದರು.
ಇದೇ ಸಂದರ್ಭದಲ್ಲಿ ಚೆಂಬು ಗ್ರಾಮ ಘಟಕವನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಶ್ರೀನಿವಾಸ ನಿಡಿಂಜಿ, ಅಧ್ಯಕ್ಷರಾಗಿ ಜಯಪ್ರಕಾಶ್ ಕುಯಿಂತೋಡು, ಉಪಾಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಗದ್ದೆ ಮತ್ತು ಶೇಷಪ್ಪ ಅತ್ಯಾಡಿ, ಕಾರ್ಯದರ್ಶಿಯಾಗಿ ವಿಜಯಕುಮಾರ್ ಪಿ.ಬಿ. ಪುಲುಮಾರು, ಜತೆ ಕಾರ್ಯದರ್ಶಿಯಾಗಿ ಭವಾನಿಶಂಕರ, ಖಜಾಂಜಿಯಾಗಿ ರಘುನಾಥ ಬಾಲೆಂಬಿ ಆಯ್ಕೆಯಾದರು.

 


ಶ್ರೀನಿವಾಸ ನಿಡಿಂಜಿಯವರು ಮಾತನಾಡಿ, ಪ್ರತಿ ತಿಂಗಳು ರೈತರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಅಭಿಪ್ರಾಯಪಟ್ಟರು. ಜಯಪ್ರಕಾಶ್ ಕುಯಿಂತೋಡು ಮಾತನಾಡಿ, ಅಡಿಕೆ ಹಳದಿ ರೋಗದ ಸಮಸ್ಯೆಗಳಿಗೆ ಸಂಪೂರ್ಣ ಸ್ಪಂದಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಅರಂಬೂರು, ದಕ್ಷಿಣ ಕನ್ನಡ ಸಂಪಾಜೆ ಕಲ್ಲುಗುಂಡಿ ಘಟಕದ ಅಧ್ಯಕ್ಷ ವಸಂತ ಪೆಲ್ತಡ್ಕ, ಕಾರ್ಯದರ್ಶಿ ಚಂದ್ರಶೇಖರ್ ಬಂಟೋಡಿ ಹಾಗೂ ಗ್ರಾಮದ ಹಲವಾರು ರೈತರು ಭಾಗವಹಿಸಿದ್ದರು. ನಂತರ ಅಡಿಕೆ ಎಲೆ ಹಳದಿ ರೋಗದ ಸ್ವಯಂಘೋಷಿತ ಅರ್ಜಿ ಫಾರಂನ್ನು ಘಟಕಕ್ಕೆ ಹಸ್ತಾಂತರಿಸಲಾಯಿತು.
ನೂತನ ಕಾರ್ಯದರ್ಶಿ ವಿಜಯಕುಮಾರ್ ವಂದಿಸಿದರು.
ಸಂಪಾಜೆಯಲ್ಲಿ ಸಭೆ : ಗ್ರಾಮ ಸಮಿತಿ ರಚನೆ :
ಕರ್ನಾಟಕ ರಾಜ್ಯ ರೈತ ಸಂಘದ ಸಭೆಯು ಆ. ೨೭ರಂದು ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಚೆದ್ಕರ್ ಜಯಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ತೀರ್ಥರಾಮ ಪರ್ನೋಜಿ, ಲೋಲಜಾಕ್ಷ ಭೂತಕಲ್ಲು, ದಿವಾಕರ ಪೈ ಅರಂಬೂರು ಹಾಜರಿದ್ದರು. ಸುಳ್ಯ ತಾಲೂಕು ಕಾರ್ಯದರ್ಶಿ ಭರತ್ ಕುಮಾರ್ ಸ್ವಾಗತಿಸಿ, ಅಡಿಕೆ ಎಲೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿಯ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೊಡಗು ಸಂಪಾಜೆ ಗ್ರಾಮ ಘಟಕವನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಚೆದ್ಕರ್ ಜಯಕುಮಾರ್, ಅಧ್ಯಕ್ಷರಾಗಿ ಎಚ್.ಎನ್. ಗೋಪಾಲಕೃಷ್ಣ ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಕೇಶವ ಚೌಟಾಜೆ, ಜತೆ ಕಾರ್ಯದರ್ಶಿಯಾಗಿ ಲೋಹಿತ್ ಹೊದ್ದೆಟ್ಟಿ, ಉಪಾಧ್ಯಕ್ಷರಾಗಿ ಪಿ ಎಲ್ ಸುರೇಶ್
ಖಜಾಂಜಿಯಾಗಿ ಹುಕ್ರಪ್ಪ ಹೆಚ್. ಬಿ ಹೊದ್ದೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಚೆದ್ಕರ್ ಜಯಕುಮಾರ್ ಮಾತನಾಡಿ, ರೈತರ ಸಮಸ್ಯೆಗಳಿಗೆ ರೈತ ಸಂಘಟನೆ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು. ಆ ನಂತರ ಅಡಿಕೆ ಎಲೆ ಹಳದಿ ರೋಗದ ಸ್ವಯಂಘೋಷಿತ ಅರ್ಜಿ ಫಾರಂನ್ನು ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಕಲ್ಲುಗುಂಡಿ ಘಟಕದ ಪದಾಧಿಕಾರಿಗಳಾದ ವಸಂತ ಪೆಲ್ತಡ್ಕ ಧನಂಜಯ ಗೌಡ ಬೈಲೆ, ಚಂದ್ರಶೇಖರ್ ಬಂಟೋಡಿ ಹಾಗೂ ಹಲವಾರು ರೈತರು ಭಾಗವಹಿಸಿದ್ದರು.