ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದ. ಕ. ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಭೇಟಿ

0

 

ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ಅಭಿವೃದ್ಧಿ ಮತ್ತು ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ವತಿಯಿಂದ ಅವರನ್ನು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಸಂಘದ ಅಧ್ಯಕ್ಷರಾದ ಭರತ್ ನೆಕ್ರಾಜೆ, ಉಪಾಧ್ಯಕ್ಷರಾದ ಸುರೇಶ್ ಬಾಲಾಡಿ, ನಿರ್ದೇಶಕ, ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಮಾದನಮನೆ, ರಾಮಣ್ಣ ಗೌಡ ಬೂದಿ ಪಳ್ಳ, ಗಣೇಶ್ ಕೆಬ್ಬೋಡಿ, ದಿನೇಶ್ ಕೈಯಾಳ, ಶೀಲಾವತಿ ಅಂಬೆಕಲ್ಲು, ರಮೇಶ್ ನಾಯ್ಕ್, ಸಂಘದ ಕಾರ್ಯದರ್ಶಿ ಗೀತಾ ಡಿ ಮತ್ತು ಸಿಬ್ಬಂದಿ ಸುಜಿತ್ ಸಿ ಉಪಸ್ಥಿತರಿದ್ದರು.