ಸಂತೋಷ್ ಕೊಡೆಂಕಿರಿಯವರ ಚಿತ್ರ ಸೆಪ್ಟೆಂಬರ್ 5 ರಿಂದ ಸುಳ್ಯದಲ್ಲಿ ಚಿತ್ರೀಕರಣ ಆರಂಭ

0

 

ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶಕರಾಗಿ ಭರವಸೆ ಮೂಡಿಸಿರುವ ಯುವ ಪ್ರತಿಭೆ ಸಂತೋಷ್ ಕೊಡೆಂಕಿರಿಯವರು ತನ್ನ ನಿರ್ದೇಶನದ 5 ನೇ ಚಿತ್ರವನ್ನು ಸುಳ್ಯ ಪರಿಸರದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು, ಚಿತ್ರದ ಮುಹೂರ್ತ ಸೆಪ್ಟೆಂಬರ್ 5 ರಂದು ಸುಳ್ಯದಲ್ಲಿ ನಡೆಯಲಿದೆ.


ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಖ್ಯಸತ ನಟಿಯರಾದ ಸುಮನ್ ರಂಗನಾಥ್, ಗೀತಾ ಭಾರತಿ ಭಟ್, ಪದ್ಮಜಾ ರಾವ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ ಇನ್ನಿತರರು ಮುಖ್ಯ ಭೂಮಿಕೆಯಲ್ಲಿರುವ ದೃಷ್ಠಿ ಮಿಡಿಯಾ ಮತ್ತು ಪ್ರೊಡಕ್ಷನ್, ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಪಾವನಾ ಸಂತೋಷ್ ರಚಿಸಿ, ಸಂತೋಷ್ ಕೊಡೆಂಕಿರಿ ನಿರ್ದೇಶಿಸುವರು. ಚಿತ್ರತಂಡ ಮತ್ತು ತಂತ್ರಜ್ಞರು ಹಾಗೂ ಗಣ್ಯರು ಸೆ.4 ರಂದೇ ಸುಳ್ಯಕ್ಕೆ ಬರಲಿದ್ದಾರೆಂದು ತಿಳಿದುಬಂದಿದೆ.

ಸುಳ್ಯದ ನಿವೃತ್ತ ಪ್ರಾಂಶುಪಾಲ ಹಾಗೂ ನ.ಪಂ. ಸದಸ್ಯರಾಗಿರುವ ಬಾಲಕೃಷ್ಣ ಭಟ್ ಕೊಡೆಂಕಿರಿಯವರ ಪುತ್ರರಾದ ಸಂತೋಷ್ ಕೊಡೆಂಕಿರಿಯವರು ಜಾಹೀರಾತು ಚಿತ್ರಗಳ ನಿರ್ದೇಶಕರಾಗಿ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದವರು. ಬಳಿಕ ಹೋಂಸ್ಟೇ ಎಂಬ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳನ್ನು ನಿರ್ದೇಶಿಸಿದರು. ತಮಿಳಿನಲ್ಲಿ ಬಿಗಿಲ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅನಿರೀಕ್ಷಿತ ಕನ್ನಡ ಚಿತ್ರಕ್ಕೆ ಕ್ರಿಯೇಟಿವ್ ನಿರ್ದೇಶಕನಾಗಿ ಕೆಲಸ ಮಾಡಿದ ಇವರು ಒಂದಾನೊಂದು ಕಾಲದಲ್ಲಿ ಎಂಬ ಏಕನಟ ಚಿತ್ರವನ್ನು ನಿರ್ದೇೆಶಿಸಿ ರಾಷ್ಟ್ರ ಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ  16 ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡವರು. ಈ ಚಿತ್ರದಲ್ಲಿ 24 ಪಾತ್ರಗಳನ್ಬು ಒಬ್ಬನೇ ಕಲಾವಿದ ನಿರ್ವಹಿಸಿ ದಾಖಲೆ ಸೃಷ್ಟಿಸಿದ್ದಾರೆ.