ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

 

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ. 3ರಂದು ಸಂಭ್ರಮಾಚರಣೆ ಮಾಡಲಾಯಿತು.

ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ|ಫಾ|ವಿಕ್ಟರ್ ಡಿ’ಸೋಜ ರವರು ವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿ|ಬಿನೋಮರವರು, ಪೂರ್ವ ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಡಾ|ಅನುರಾಧಾ ಕುರುಂಜಿ ಹಾಗೂ ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

 

ಸಭಾ ಕಾರ್ಯಕ್ರಮದಲ್ಲಿ ಪೋಷಕ ಸಭೆಯ ಸದಸ್ಯರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಭಾಗವಹಿಸಿದ್ದರು. ಪ್ರೌಢ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಹರೀಶ್ ರಾವ್ ಕಾರ್ಯಕ್ರಮಕ್ಕೆ ಸಹಕಾರವಿತ್ತರು.

ಶಾಲಾ ಸಂಚಾಲಕ ರೆ|ಫಾ|ವಿಕ್ಟರ್ ಡಿ’ಸೋಜರವರ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ನಾಯಕಿ ಇಂಚರ ಪಿ.ಆರ್.,ಹತ್ತನೇ ತರಗತಿ ವಿದ್ಯಾರ್ಥಿಗಳಾದ ಆಯಿಶತ್ ಅಶ್ಫಿಯ ಶಿಭಾ,ಗಗನ್ ದೀಪ್ ಕಾರ್ಯಕ್ರಮ ನಿರ್ವಹಿಸಿದರು.


ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿ, ಶಾಲಾ ಸಂಚಾಲಕ ವಂ| ಫಾ|ವಿಕ್ಟರ್ ಡಿ’ಸೋಜರವರು ದೀಪ ಬೆಳಗಿಸಿದರು. ಹತ್ತನೆಯ ತರಗತಿ ವಿದ್ಯಾರ್ಥಿನಿ ನೇಹಾ.ಕೆ. ಸ್ವಾಗತಿಸಿದರು. ತದನಂತರ ಶಿಕ್ಷಕರಿಗೆ ಆಟೋಟ ಕಾರ್ಯಕ್ರಮ ನಡೆಸಿದರು. ಹತ್ತನೆ ತರಗತಿಯ ಹನಾ ಫಾತಿಮ, ಕದೀಜತ್ ಹನೀನ ರಿಝ, ಮೇಘನ್ ಡಿ.ಸಿ., ತೇಜಸ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಿದರು. ವಂದನಾರ್ಪಣೆ ವಿದ್ಯಾರ್ಥಿನಿ ರಬೀಯತುಲ್ ಸಫ್ನಾಝ್ ನೆರವೇರಿಸಿದರು. ಶಿಕ್ಷಕಿ ಶ್ರೀಮತಿ ಉಷಾದೇವಿ ಮತ್ತು ಶಿಕ್ಷಕ ಪುರುಷೋತ್ತಮ್ ಕಾರ್ಯಕ್ರಮದ ಜವಾಬ್ದಾರಿಯನ್ನು ಪೂರೈಸಿದರು.