ಸುಬ್ರಹ್ಮಣ್ಯ  ಶ್ರೀ ವಾಣಿ ವನಿತಾ ಸಮಾಜದ ಅಧ್ಯಕ್ಷೆಯಾಗಿ ಶ್ರೀಮತಿ ಹೇಮಾವತಿ, ಕಾರ್ಯದರ್ಶಿಯಾಗಿ ಪುಷ್ಪ

0

 

ಶ್ರೀ ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ ಇದರ ವಾರ್ಷಿಕ ಮಹಾಸಭೆಯು ಸುಬ್ರಹ್ಮಣ್ಯ ದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷೆಯಾದ ಶ್ರೀಮತಿ ಜಯಲಕ್ಷ್ಮಿ ಪಿ ಎಸ್ ವಹಿಸಿದ್ದರು. ತಾಲೂಕು ಮಟ್ಟದ ಮಹಿಳಾ ಮಂಡಲಗಳ ಒಕ್ಕೂಟದ ಅದ್ಯಕ್ಷೆ, ತ್ರಿವೇಣಿ ದಾಮ್ಲೆ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಗತ ವರ್ಷದ ವರದಿಯನ್ನು ಸೌಮ್ಯ ವಾಚಿಸಿದರು. ಗತವರ್ಷದ ಖರ್ಚು ವೆಚ್ಚವನ್ನು ಶ್ರೀಮತಿ ತ್ರಿವೇಣಿದಾಮ್ಲೆ ಮಂಡಿಸಿದರು.


ಅದ್ಯಕ್ಷೆ ಜಯಲಕ್ಷ್ಮಿ ಯವರು ಎಲ್ಲರನ್ನು ಸ್ವಾಗತಿಸಿದರು, ಶ್ರೀಮತಿ ಶೋಭಾ ನಲ್ಲೂರಾಯ ವಂದಿಸಿದರು. ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು
ನೂತನ ಅಧ್ಯಕ್ಷರಾಗಿ ಶ್ರೀಮತಿ ಹೇಮಾವತಿ, ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ, ಕಾರ್ಯದರ್ಶಿ ಯಾಗಿ ಪುಷ್ಪ ಜೊತೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ , ಖಜಾಂಚಿಯಾಗಿ ಸೌಮ್ಯ , ಗೌರವ ಅಧ್ಯಕ್ಷರನ್ನಾಗಿ ಜಯಲಕ್ಷ್ಮಿ ಪಿ ಎಸ್, ಸದಸ್ಯರಾಗಿ ಶೋಭಾ ನಲ್ಲೂರಾಯ, ರತ್ನ ಕುಮಾರಿ, ಸುಜಾತಾ, ತ್ರಿವೇಣಿ ದಾಮ್ಲೆ, ಸುಶೀಲ, ರವರನ್ನು ಆಯ್ಕೆ ಮಾಡಲಾಯಿತು.