ಮನಸ್ಸಿಗೆ ವಯಸ್ಸಾಗಬಾರದು : ಸುಬ್ರಾಯ ಚೊಕ್ಕಾಡಿ

0

 

 

ಚೊಕ್ಕಾಡಿ ಹುಟ್ಟುಹಬ್ಬ, ಅಭಿನಂದನೆ ಸಮಾರಂಭ ದೇಹಕ್ಕೆ ವಯಸ್ಸಾಗೋದು ಸಹಜ. ಆದರೆ ಮನಸ್ಸಿಗೆ ವಯಸ್ಸಾಗಬಾರದು. ಸದಾ ಕ್ರಿಯಾಶೀಲವಾಗಿ ಇದ್ದಾಗ ಮನಸ್ಸನ್ನು ಸದಾ ಯೌವನವಾಗಿಡಲು ಸಾಧ್ಯವಿದೆ. ಎಂದು ಖ್ಯಾತ ಹಿರಿಯ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿ ನುಡಿದರು. ಬೆಂಗಳೂರಿನ ಐಲೆಸಾ – ದ ವಾಯ್ಸ್ ಆಫ್ ಓಷನ್ ಸಂಸ್ಥೆಯು ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರಿಗೆ ಕೊಡ ಮಾಡಿದ ವಯೋ ಸಮ್ಮಾನ, ವಿಶಿಷ್ಟ ಗೌರವ ಸ್ವೀಕರಿಸಿ ಮಾತನಾಡಿದರು.

 

ಐಲೇಸಾ ತಂಡ, ಕವಿ ಸುಬ್ರಾಯ ಚೊಕ್ಕಾಡಿ ಮನೆಗೆ ಭೇಟಿ ನೀಡಿ ಅದರ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರ 83ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾವ್ಯ ಸಂವಾದ ನಡೆಸಿದರು. ಬಳಿಕ ಸುಳ್ಯದ ರಂಗಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಐಲೇಸಾ ತಂಡದವರು ಚೊಕ್ಕಾಡಿಯವರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಗೌರವಿಸಿದರು.


ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ಧ ವಾಗ್ಮಿ ಮತ್ತು ಚಿಂತಕ ವೈ. ವಿ. ಗುಂಡೂರಾವ್ ಮಾತನಾಡಿ ಚೊಕ್ಕಾಡಿ ಅವರ ಕವನಗಳು, ಮನ ನಿರ್ಮಲಗೊಳಿಸಿ, ಚೊಕ್ಕ ಮಾಡಿ ಸಂತೃಪ್ತಿ ನೀಡುತ್ತವೆ.
ರಂಗಕರ್ಮಿ, ಜೀವನ್ ರಾಂ ಸುಳ್ಯ, ಅವರು ಮಾತನಾಡಿ, ಸುಬ್ರಾಯ ಚೊಕ್ಕಾಡಿ ಅವರು, ನನ್ನ ಪ್ರತಿ ಹೆಜ್ಜೆಯಲ್ಲೂ ಗುರುಗಳಾಗಿ ಮಾರ್ಗದರ್ಶನ ಇತ್ತವರು ಎಂದರು.‌
ಕಾರ್ಯಕ್ರಮದ ಸಂದರ್ಭದಲ್ಲಿ ಪೇತ್ರಿ ವಿಶ್ವನಾಥ ಶೆಟ್ಟಿ ಅವರ ತ್ಯಾಂಪರನ ಡೋಲು ಕಥೆ ಆಧಾರಿತ, ಅಕ್ಷತಾ ರಾಜ್ ಪೆರ್ಲ ಬರೆದ ತುಳು ನಾಟಕ, ಗಿಡ್ಡಿಯನ್ನು ಬಿಡುಗಡೆ ಮಾಡಲಾಯಿತು. ತುಳು ಹಾಡಿನ, ಅರೆಭಾಷೆ ಅವತರಣಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಸುಬ್ರಾಯ ಚೊಕ್ಕಾಡಿ ಅವರ ಹಾಡಿನ, ಆಡಿಯೋ ಆಲ್ಬಂ, ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯದ ಸಾಹಿತ್ಯ ಪರಿಷತ್ತಿನ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ನಿಟ್ಟೆ ಯೂನಿವರ್ಸಿಟಿ ಡಾ. ಸಾಯಿಗೀತ, ವೀಣಾ ಟಿ ಶೆಟ್ಟಿ ಸಾಮಾನಿ, ಮುಂಬಯಿಯ ಸಾಹಿತ್ಯ ಪೇತ್ರಿ ವಿಶ್ವನಾಥ್ ಶೆಟ್ಟಿ, ಜೀಟಿಗೆ ಸಿನಿಮಾದ ನಿರ್ದೇಶಕ, ಸಂತೋಷ್ ಮಾಡ,ಚಂದ್ರಾವತಿ ಬಡ್ಡಡ್ಕ, ತೇಜು ಕೊಲ್ಲಮೊಗ್ರ, ವಿನೋದ್ ಮೂಡಗದ್ದೆ, ಅಕ್ಷತಾ ರಾಜ್ ಪೆರ್ಲ, ಮುಂಬಯಿಯ ಸೂರಿ ಮಾರ್ನಡ್, ತುಳು ಕನ್ನಡ ಕವಿ ಸಾಹಿತಿ, ಶಾಂತಾರಾಮ್ ಶೆಟ್ಟಿ, ನಮಿತಾ ಅನಂತ್, ಯೋಗಿತಾ, ಕಲಾಪ್ರೆಮಿ ಎಂ. ಬಿ. ಸದಾಶಿವ, ಜಯಪ್ರಕಾಶ್ ಕುಕ್ಕೆಟಿ, ತೇಜೇಶ್ವರ್ ಕುಂದಲ್ಪಾಡಿ ಬಾಗವಹಿಸಿದರು. ಅನಂತ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.