ಸುಳ್ಯದಲ್ಲಿ ಭಾರಿ ಮಳೆ

0

ಪೈಚಾರಿನ ಆರ್ತಾಜೆಯಲ್ಲಿ ರಸ್ತೆ, ತೋಟ ಜಲಾವೃತ, 2 ಗಂಟೆ ಟ್ರಾಫಿಕ್ ಜಾಮ್

ಸುಳ್ಯದಲ್ಲಿ ಇಂದು ಸಂಜೆಯಿಂದ ವರುಣನ ಆರ್ಭಟ ಜೋರಾಗಿದ್ದು, ಪೈಚಾರು- ಸೋಣಂಗೇರಿ ರಸ್ತೆ ಮಧ್ಯೆ
ಆರ್ತಾಜೆ ಎಂಬಲ್ಲಿ ಮೋರಿಯಿಂದ ನೀರು ಮೇಲೆ ಬಂದು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಸುಮಾರು 2ಗಂಟೆಯ ಹೊತ್ತು ಟ್ರಾಫಿಕ್ ಜಾಮ್ ಸಂಭವಿಸಿದ್ದು,

ನಾಗರಿಕರು, ವಾಹನ ಸವಾರರು ತೊಂದರೆಗೀಡಾದರು. ಕಚೇರಿಯಿಂದ ಮನೆಗೆ ತೆರಳಲು ತಯಾರಾಗಿದ್ದ ಉದ್ಯೋಗಿಗಳಿಗೆ ತೀವ್ರ ತೊಂದರೆ ಉಂಟಾಯಿತು.
ಹಾಗೂ ಹತ್ತಿರದ ಉಮೇಶ್ ಎಂಬವರ ತೋಟಕ್ಕೂ ನೀರು ತುಂಬಿದ್ದು, ತೋಟ ಜಲಾವೃತಗೊಂಡಿದೆ.
ಈ ಮೋರಿ ಇತ್ತೀಚೆಗೆ ರಸ್ತೆ ಅಗಲೀಕರಣ ಗೊಂಡಾಗ ನೂತನವಾಗಿ ಮಾಡಲಾಗಿದೆ.

 

ಮಳೆ ಕಡಿಮೆ ಆಗುತ್ತಿದ್ದಂತೆ ರಸ್ತೆಯಲ್ಲಿ ಹರಿದ ನೀರು ಕಡಿಮೆಯಾದ ಬಳಿಕ ವಾಹನಗಳು ಹೋಗಲು ಪ್ರಾರಂಭಿಸಿತು.