ಬೇಂಗಮಲೆ  – ಚೊಕ್ಕಾಡಿ ರಸ್ತೆಯ ಮುಂಡ್ರಾಜೆಯಲ್ಲಿ ಜಲಾವೃತಗೊಂಡ ರಸ್ತೆ

0

 

ಕೆಲಹೊತ್ತು ವಾಹನ ಸಂಚಾರ ಸ್ಥಗಿತ

 

ಇಂದು ಸಂಜೆ ಸುರಿದ ಧಾರಕಾರ ಮಳೆಯಿಂದಾಗಿ ಬೇಂಗಮಲೆ ಚೊಕ್ಕಾಡಿ ರಸ್ತೆಯ ಮುಂಡ್ರಾಜೆ ಎಂಬಲ್ಲಿ ನೀರು ರಸ್ತೆಯ ಮೇಲೆ ಹರಿದು ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಕೆಲಹೊತ್ತು ರಸ್ತೆ ಬ್ಲಾಕ್ ಆಗಿ
ಕೆಲವು ವಾಹನಗಳು ಬೇರೆ ರಸ್ತೆ ಯಾಗಿ ತೆರಳಿದವು. ರಸ್ತೆ ಬ

ದಿ ಚರಂಡಿ ವ್ಯವಸ್ಥೆಯು ಸರಿ ಇಲ್ಲದಿರುವುದರಿಂದ ನೀರು ವಿಪರೀತ ಪ್ರಮಾಣದಲ್ಲಿ ರಸ್ತೆ ಯಲ್ಲಿ ಹರಿಯುವಂತಾಗಿದೆ.
ರಸ್ತೆ ತೋಡಿನಂತಾಗಿದ್ದು ವಾಹನ ಸವಾರರಿಗೆ ತೊಂದರೆಯಾಯಿತು.
ಕೆಲವು ದಿನಗಳ ಹಿಂದೆ ಕೂಡಾ ಈ ರಸ್ತೆಯಲ್ಲಿ ಇದೇ ರೀತಿ ನೀರು ಬಂದಿದ್ದು ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ರಸ್ತೆಯನ್ನು ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಚರಂಡಿ ವ್ಯವಸ್ಥೆಯನ್ನು ಕೂಡ ಸರಿ ಮಾಡಿ ಮಳೆಯಿಂದ ಆಗುವ ತೊಂದರೆಯನ್ನು ತಪ್ಪಿಸಬೇಕಾಗಿ ಊರವರು ಆಗ್ರಹಿಸಿದ್ದಾರೆ.