ಬೊಳುಬೈಲು :  ಮನೆಗಳಿಗೆ ನುಗ್ಗಿದ ಮಳೆ ನೀರು

0

 

ಮನೆಯ ಪೀಠೋಪಕರಣಗಳು ಸೇರಿದಂತೆ ಒದ್ದೆಯಾದ ದಾಖಲೆ ಪತ್ರಗಳು

ಸುಳ್ಯ ಇಂದು ಸಂಜೆ ಸುರಿದ ಭಾರಿ ಮಳೆಗೆ ಮಾಣಿ ಮೈಸೂರು ಹೆದ್ದಾರಿ ಬೊಳುಬೈಲು ಬಳಿ ರಸ್ತೆಯಲ್ಲಿ ನೀರು ತುಂಬಿ ಎರಡು ಮನೆಗಳಿಗೆ ನೀರು ನುಗ್ಗಿ ಮನೆಯ ಪೀಠೋಪಕರಣ ಸೇರಿದಂತೆ ಅಲಮಾರಿಗಳಲ್ಲಿ ಇದ್ದ ರೇಷನ್ ಕಾರ್ಡ್ ಮತ್ತು ಪಾಸ್ಪೋರ್ಟ್, ಮಕ್ಕಳ ಜನನ ಪ್ರಮಾಣ ಪತ್ರ ಮುಂತಾದ ದಾಖಲೆ ಪತ್ರಗಳು ನೀರಿನಲ್ಲಿ ಹೊದ್ದೆಯಾದ ಘಟನೆ ಸಂಭವಿಸಿದೆ.
ಬೊಳುಬೈಲು ನಿವಾಸಿ ಮುಳುಗುತಜ್ಞ ಲತೀಫ್ ಮತ್ತು ಪೈಚಾರು ಸುದ್ದಿ ಪತ್ರಿಕೆಯ ಏಜೆಂಟ್ ಮಹಮ್ಮದ್ ಎಂಬುವವರ ಮನೆ ಇದಾಗಿದ್ದು
ಮಳೆ ನೀರು ನುಗ್ಗಿದ ಸಂದರ್ಭ ಲತೀಫ್ ರವರ ಮನೆಯ ಅಂಗಳದಲ್ಲಿ ಇದ್ದ ದ್ವಿಚಕ್ರ ವಾಹನವೂ ಕೂಡ ನೀರಿನಿಂದ ಆವರ್ತಗೊಂಡಿದ್ದು
ಕುಡಿಯುವ ನೀರಿನ ಸಣ್ಣ ಕೆರೆಗೆ ಕೆಸರು ನೀರು ತುಂಬಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ಈ ರೀತಿಯ ಘಟನೆ ಸಂಭವಿಸಲು ಮುಖ್ಯ ರಸ್ತೆಯಲ್ಲಿ ಇರುವ ಅವೈಜ್ಞಾನಿಕ ಚರಂಡಿ ನಿರ್ಮಾಣವೇ ಕಾರಣ ಎಂದು ಮನೆಯವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಚರಂಡಿ ವ್ಯವಸ್ಥೆಯ ಬಗ್ಗೆ ಶಾಶ್ವತ ಕಾಮಗಾರಿ ನಡೆಸದ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭ ಸ್ಥಳೀಯ ಯುವಕರ ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಇತ್ತ ಗಮನ ಹರಿಸಿ ಮಳೆ ನೀರು ಸರಾಗವಾಗಿ ಸಾಗಲು ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.