ಪೈಲಾರು- ಜಬಳೆ ರಸ್ತೆಯ ಸಂಪರ್ಕ ಸೇತುವೆ ಕಡಿತ- ಊರವರಿಂದ ತಗಡು ಹಾಸಿದ ಪಾಲ ನಿರ್ಮಾಣ

0
132

 

ಅಮರಮುಡ್ನೂರು ಗ್ರಾಮದ ಪೈಲಾರು -ಜಬಳೆ ರಸ್ತೆಯ ಕೋಡ್ತುಗುಳಿ ಎಂಬಲ್ಲಿ ಸೇತುವೆ ಕೆಲಸ ಕಾಮಗಾರಿಯು ನಡೆಯುತ್ತಿದ್ದು ಸೆ.5 ರಂದು ಸುರಿದ ವಿಪರೀತ ಮಳೆಗೆ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಸಂಪರ್ಕ ಕಡಿತಗೊಂಡಿತು. ಇದರಿಂದ ಈಭಾಗದ ನಾಗರಿಕರು ವಾಹನ ಸವಾರರು ಪರದಾಡುವಂತಾಯಿತು. ತಾತ್ಕಾಲಿಕವಾಗಿ ಶೌರ್ಯ ವಿಪತ್ತು ಘಟಕದ ಸದಸ್ಯರು ಅಡಿಕೆ ಮರದ ಪಾಲ ನಿರ್ಮಿಸಿ ನಡೆದುಕೊಂಡು ಹೋಗಲು ಅನೂಕೂಲ ಮಾಡಿದ್ದಾರೆ.

ಇದೀಗ ಸ್ಥಳೀಯರು ಸೇರಿ ದ್ವಿಚಕ್ರ ವಾಹನ ಸಂಚರಿಸಲು ಅನೂಕೂಲಕರವಾಗುವಂತೆ ತಗಡನ್ನು ಹಾಸಿ ತಾತ್ಕಾಲಿಕ ಪಾಲವನ್ನು ನಿರ್ಮಿಸಿದ್ದಾರೆ. ಈ ಭಾಗದ ಬಹುತೇಕ ಮಂದಿ ದ್ವಿಚಕ್ರ ವಾಹನ ಹೊಂದಿದವರಾಗಿದ್ದು ಸದ್ಯದ ಮಟ್ಟಿಗೆ ಪಾಲದಲ್ಲಿ ದ್ವಿಚಕ್ರ ವಾಹನವನ್ನು ದಾಟಿಸಿಕೊಂಡು ಹೋಗಲು ಅವಕಾಶವಿದ್ದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಶ್ರಮದಾನದ ಕಾರ್ಯದ ನೇತೃತ್ವವನ್ನು ಸ್ಥಳೀಯರಾದ ಮುರಳೀಧರ ಕೋಡ್ತುಗುಳಿ, ಪೃತ್ವೀಶ್ ಕೋಡ್ತುಗುಳಿ, ಜಯರಾಮ ಶೆಟ್ಟಿ, ಶಿವರಾಮ ಗೌಡ, ತಾರನಾಥ ಗೌಡ, ಚಿದಾನಂದ ಗೌಡ, ಕುಶಾಲಪ್ಪ ಗೌಡ, ರಾಜ ಪೈಲಾರು ಹಾಗೂ ಅಭ್ಯುದಯ ಕನ್ಸ್ಟ್ರಕ್ಷನ್ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here