ಮೇನಾಲದಲ್ಲಿ ತೆರವುಗೊಳಿಸಿರುವ ಅಂಬೇಡ್ಕರ್ ಧ್ವಜ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ: ಸುಂದರ ಪಾಟಾಜೆ ಎಚ್ಚರಿಕೆ

0
104

 

p>

ಮೇನಾಲ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಧ್ವಜವನ್ನು ಪಿಡಿಒ ತೆರವುಗೊಳಿಸಿದ್ದು ಹಾಗಾಗಿ ಇದನ್ನು ತಕ್ಷಣ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಲಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಕಾರ್ಯಕ್ರಮಯೊಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜವನ್ನು ಆ ಸಮುದಾಯ ಕಟ್ಟಡದಲ್ಲಿ ಅಳವಡಿಸಿದ್ದರು. ಹೀಗೆ ಅಳವಡಿಸಿದಂತ ಧ್ವಜವನ್ನು ಏಕಾಏಕಿ ಅಜ್ಜಾವಾರ ಗ್ರಾಮ ಪಂಚಾಯತ್ ನ ಪಿಡಿಒ ತೆರವುಗೊಳಿಸಿದ ಆರೋಪ ಕೇಳಿ ಬಂದಿತ್ತು.
ಇದರ ಹಿನ್ನೆಲೆಯಲ್ಲಿ ಸೆಪ್ಟಂಬರ್ 30 ರಂದು ನಾವು ಸಂಘಟನೆಯ ಜಿಲ್ಲಾ ಸಂಚಾಲಕ ಪರಮೇಶ್ವರ ಕೆಮ್ಮಿಂಜೆಯವರ ಜೊತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇದಕ್ಕೆ ಕಾರಣಕರ್ತರಾದ ಗ್ರಾಮದ ಪಿ ಡಿ ಓ ಬಳಿ ಮಾಹಿತಿ ಪಡೆದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶದ ಸಂವಿಧಾನ ಶಿಲ್ಪಿಯಾಗಿದ್ದು ಅವರ ಧ್ವಜ ಮತ್ತು ಭಾವಚಿತ್ರಕ್ಕೆ ಅಪಾರ ಗೌರವವನ್ನು ಇಡೀ ದೇಶವೇ ನೀಡುತ್ತಿದೆ. ಅಂತದ್ರಲ್ಲಿ ಅವರ ಭಾವಚಿತ್ರದ ಧ್ವಜವನ್ನು ತೆಗೆದು ಅಪಮಾನ ಮಾಡಿರುವುದು ಸರಿಯಲ್ಲ.
ಆದಕಾರಣ ಇನ್ನೂ ನಾಲ್ಕು ದಿವಸದಲ್ಲಿ ಅಂಬೇಡ್ಕರ್ ಭವನದಲ್ಲಿ ಹಾಕಿರುವಂತಹ ಧ್ವಜವನ್ನು ಪುನಃ ನೀವೇ ಹಾಕಬೇಕು. ಒಂದು ವೇಳೆ ಹಾಕದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯ ವತಿಯಿಂದ ಅಜ್ಜಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here