ಸುಳ್ಯ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ

0

 

ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರುಗಳ ಉಪಸ್ಥಿತಿ

ಸುಳ್ಯ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜಾ ಕಾರ್ಯಕ್ರಮ ಅಕ್ಟೋಬರ್ 4ರಂದು ಸಂಜೆ ಪೊಲೀಸ್ ಠಾಣಾ ವಠಾರದಲ್ಲಿ ಆಚರಿಸಲಾಯಿತು.
ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಪೊಲೀಸ್ ಇಲಾಖೆಯ, ಮತ್ತು ಅಧಿಕಾರಿಗಳ, ಸಿಬ್ಬಂದಿ ವರ್ಗದವರ ವಾಹನಗಳಿಗೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ನಂತರ ನಡೆದ ಮಹಾಪೂಜೆಯಲ್ಲಿ ನೂರಾರು ಮಂದಿ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಡಿವೈಎಸ್ಪಿ ವೀರಯ್ಯ ಹಿರೇಮಠ,ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಎ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ ವಿ ರೇಣುಕಾ ಪ್ರಸಾದ್, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ ವಿ ಚಿದಾನಂದ, ಮುಖಂಡರುಗಳಾದ ಡಾ. ಉಜ್ವಲ್ ಊರುಬೈಲು, ಸೋಮಶೇಖರ ಕೊಯಿಂಗಾಜೆ, ಹರೀಶ್ ರೈ ಉಬರಡ್ಕ, ರಜತ್ ಅಡ್ಕಾರ್, ರಾಮಕೃಷ್ಣ ಆಲಂಗ್ಯಾ, ಪಿ ಎಸ್ ಗಂಗಾಧರ್, ಸುಂದರ ಪಾಟಾಜೆ, ಹಾಜಿ ಕೆ ಎಂ ಮುಸ್ತಫ ಜನತಾ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಕೆಬಿ ಇಬ್ರಾಹಿಂ, ಮೊಹಮ್ಮದ್ ಕುನ್ನಿ ಗೂನಡ್ಕ, ಸವಾದ್ ಗೂನಡ್ಕ, ಶಾಫಿ ಕುತ್ತಮಟ್ಟೆ, ಶಿಹಾಬ್ ಕಟ್ಟೆಕಾರ್, ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನೂರಾರು ಮಂದಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here