ಗ್ರಾ.ಪಂ. ಅಧ್ಯಕ್ಷರುಗಳ ಅಧಿಕಾರ ಮೊಟಕು ವಿರೋಧಿಸಿ ತಾ.ಪಂ. ಎದುರು ಕಾಂಗ್ರೆಸ್ ಪ್ರತಿಭಟನೆ

0

ಚೆಕ್‌ಗಳಿಗೆ ಸಹಿ ಹಾಕುವ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಅಧಿಕಾರವನ್ನು ಹಿಂಪಡೆದು ಪಿಡಿಒಗಳಿಗೆ ನೀಡುವ ರಾಜ್ಯ ಸರಕಾರದ ಚಿಂತನೆಯನ್ನು ವಿರೋಧಿಸಿ ಕಾಂಗ್ರೆಸ್ ಇಂದು ಸುಳ್ಯ ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಸುಳ್ಯ ತಾಲೂಕಿನಲ್ಲಿರುವ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರು ಹಾಗೂ ಮಾಜಿ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಈ ಪ್ರತಿಭಟನೆಯನ್ನುದ್ಧೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸುಳ್ಯ ನಗರ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮಾಜಿ ಜಿ.ಪಂ. ಸದಸ್ಯ ಭರತ್ ಮುಮಡೋಡಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಲ್ನಾಡುಗುತ್ತುರವರುಗಳು ರಾಜ್ಯ ಬಿಜೆಪಿ ಸರಕಾರವು ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಎಸಗಿದೆ ಮಾತ್ರವಲ್ಲದೆ ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಇರುವ ಚೆಕ್‌ಗೆ ಸಹಿ ಹಾಕುವ ಅಧಿಕಾರವನ್ನೂ ಕಿತ್ತುಕೊಳ್ಳಲು ಹೊರಟಿದೆ. ಸರಕಾರದ ಈ ಪ್ರಸ್ತಾಪಕ್ಕೆ ಜನರಿಂದ ತೀವ್ರ ಆಕ್ಷೇಪಗಳು ಬರುತ್ತಿರುವ ಹಿನ್ನಲೆಯಲ್ಲಿ ನಾವು ಅಧಿಕಾರ ಕಿತ್ತುಕೊಳ್ಳುವ ತೀರ್ಮಾನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿನ್ನೆ ತಿಳಿಸಿದ್ದಾರೆ. ಆದರೆ ಬಿಜೆಪಿಗರು ಡೋಂಗಿಗಳು. ಅವರ ಮಾತು ನಂಬಿಕೆಗೆ ಅರ್ಹವಲ್ಲ. ಅಧ್ಯಕ್ಷರ ಅಧಿಕಾರ ಕಡಿತಗೊಳಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿ ಆದೇಶ ಹೊರಡಿಸಬೇಕು. ಅದುವರೆಗೆ ನಮ್ಮ ಹೋರಾಟ ಸಾಗುತ್ತದೆ ಎಂದು ತಿಳಿಸಿದರು.


ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ತಾ.ಪಂ. ಇ.ಒ. ಭವಾನಿಶಂಕರ್‌ರವರಿಗೆ ಸರಕಾರಕ್ಕೆ ತಲುಪಿಸಬೇಕಾದ ಮನವಿಯನ್ನು ನೀಡಲಾಯಿತು. ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್ ನೆಕ್ರೆಪ್ಪಾಡಿ ಸ್ವಾಗತಿಸಿ, ಜಿಲ್ಲಾ ಐಟಿ ಘಟಕದ ಮುಖ್ಯಸ್ಥರಾದ ಸಚಿನ್‌ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆಪಿಸಿಸಿ ಸದಸ್ಯರುಗಳಾದ ಡಾ.ಬಿ.ರಘು, ಟಿ.ಎಂ.ಶಹೀದ್, ಜಿ.ಕೃಷ್ಣಪ್ಪ, ಮಾಜಿ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಗ್ರಾ.ಪಂ. ಅಧ್ಯಕ್ಷರುಗಳಾದ ಜಗನ್ನಾಥ ಪೂಜಾರಿ ಮುಕ್ಕೂರು, ಶ್ರೀಮತಿ ಹಾಜಿರಾ ಗಫೂರ್ ಕಲ್ಮಡ್ಕ, ಚಿತ್ರಕುಮಾರಿ ಉಬರಡ್ಕ, ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ ಮನಮೋಹನ್, ಲಿಸ್ಸಿ ಮೊನಾಲಿಸ ಮತ್ತು ಗ್ರಾ.ಪಂ. ಸದಸ್ಯರುಗಳಾದ ಸೋಮಶೇಖರ ಕೊಯಿಂಗಾಜೆ, ಕೆ.ಆರ್.ಜಗದೀಶ್ ರೈ, ವಿಜಯ ಸಂಪಾಜೆ, ಸುಮತಿ ಶಕ್ತಿವೇಲು, ಅನುಪಮಾ ಸಂಪಾಜೆ, ಅಬೂಸಾಲಿ ಗೂನಡ್ಕ, ಎಸ್.ಕೆ.ಹನೀಫ್, ಶೌವಾದ್ ಗೂನಡ್ಕ, ರವೀಂದ್ರ ತೊಡಿಕಾನ, ಅಬ್ದುಲ್ಲಾ ಅಜ್ಜಾವರ, ರಮೇಶ್ ಮಾವಿನಪಳ್ಳ, ರಾಹುಲ್ ಅಡ್ಪಂಗಾಯ, ಮೀನಾಕ್ಷಿ ಕುಡೆಕಲ್ಲು, ಧರ್ಮಪಾಲ ಕೊಯಿಂಗಾಜೆ, ಗುಲಾಬಿ ಪೆರುವಾಜೆ, ಪವಿತ್ರ ಕುದ್ವ, ಶರೀಫ್ ಕಂಠಿ, ತಿರುಮಲೇಶ್ವರಿ ಅರ್ಭಡ್ಕ, ಲೋಕೇಶ್ ಆಕ್ರಿಕಟ್ಟೆ, ಡೇವಿಡ್ ಧೀರಾ ಕ್ರಾಸ್ತಾ, ಅನಿಲ್ ಬಳ್ಳಡ್ಕ, ಲಕ್ಷ್ಮಣ ಗೌಡ ಬೊಳ್ಳಾಜೆ, ಜಯರಾಮ ಅತ್ಯಡ್ಕ, ಶಾಹಿನಾ ಪೆರುವಾಜೆ, ಉಷಾ ಜಯರಾಮ್,ಅಲ್ಲದೆ ಪಕ್ಷದ ಮುಖಂಡರುಗಳಾದ ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫಾ, ಅನಸೂಯ ಪೆರುವಾಜೆ, ಚಂದ್ರಕಾಂತ ನಾರ್ಕೋಡು, ರಾಧಾಕೃಷ್ಣ ಪರಿವಾರಕಾನ, ದಿನೇಶ್ ಸರಸ್ವತಿಮಹಲ್, ರಹೀಂ ಬೀಜದಕಟ್ಟೆ, ಭವಾನಿಶಂಕರ ಕಲ್ಮಡ್ಕ, ಕೀರ್ತನ್ ಕೊಡಪಾಲ, ದಿನೇಶ್ ಅಂಬೆಕಲ್ಲು, ಎಂ.ಜೆ. ಶಶಿಧರ, ಶ್ರೀಹರಿ ಕುಕ್ಕುಡೇಲು, ಸುಧೀರ್ ರೈ ಮೇನಾಲ, ಸದಾನಮದ ಮಾವಜಿ, ಸೋಮಶೇಖರ ಕೇವಳ, ಪರಮೇಶ್ವರ ಕೆಂಬಾರೆ, ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ದಿನಕರ ಸಣ್ಣಮನೆ, ಅಣ್ಣಾದೊರೈ ಅಡ್ಯಡ್ಕ, ಪವನ್ ಮುಂಡ್ರಾಜೆ, ನಂದರಾಜ ಸಂಕೇಶ, ಮೂಸಾ ಪೈಂಬೆಚ್ಚಾಲ್, ಅಬ್ಬಾಸ್ ಅಡ್ಪಂಗಾಯ, ರಾಜರಾಮ ಬೆಟ್ಟ, ಜಯಲತಾ ಪಂಬೆತ್ತಾಡಿ, ವಿಜೇಶ್ ಹಿರಿಯಡ್ಕ, ಕರುಣಾಕರ ಆಳ್ವ, ಶಾಫಿ ಕುತ್ತಮೊಟ್ಟೆ ಪ್ರತಿಭಟನೆಯಲ್ಲಿ ಭಾಗಿಗಳಾಗಿದ್ದರು.