ವಿದ್ಯಾ ಭಾರತಿಯ ರಾಷ್ಟ್ರೀಯ ಕಬಡ್ಡಿಯಲ್ಲಿ ಜಯಗಳಿಸಿ ಆಗಮಿಸಿದ ಎಲಿಮಲೆ ಜ್ಞಾನದೀಪ ಕಬಡ್ಡಿ ತಂಡಕ್ಕೆ ಅದ್ದೂರಿ ಸ್ವಾಗತ

0

 

ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾ ಭಾರತಿ ಶಿಕ್ಷಾ ಸಂಸ್ಥಾನದ ಜಿಲ್ಲೆ, ರಾಜ್ಯ, ದಕ್ಸಿಣ ಮಧ್ಯ ಕ್ಷೇತ್ರ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಜಯಗಳಿಸಿ ಇಂದು ತವರಿಗೆ ಆಗಮಿಸಿದ ಸಂದರ್ಭದಲ್ಲಿ ಎಲಿಮಲೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ತಂಡದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಹಾರ ಹಾಕಿ, ಪುಷ್ಪ ನೀಡಿ ಸ್ವಾಗತಿಸಿ ಎಲಿಮಲೆ ಯಲ್ಲಿ ಮೆರವಣಿಗೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ದೈಹಿಕ ಶಿಕ್ಷಕಿ ದಿವ್ಯಾ ಬಾಳುಗೋಡು ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಅವರನ್ನೂ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಲಾ ಸಂಚಾಲಕರಾದ ಎ.ವಿ. ತೀರ್ಥರಾಮ, ಅಧ್ಯಕ್ಷರಾದ ಚಂದ್ರಶೇಖರ ಭಟ್ ತಳೂರ್, ನಿರ್ದೇಶಕರುಗಳಾದ ಕೃಷ್ಣಯ್ಯ ಮೂಲೆತೋಟ, ಮಹಾವೀರ ಜೈನ್, ರಾಧಾಕೃಷ್ಣ ಮಾವಿನಕಟ್ಟೆ, ಮೋಹನ್ ರಾಮ್ ಸುಳ್ಳಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಈ ಕಬಡ್ಡಿ ತಂಡವು ವಿದ್ಯಾ ಭಾರತೀಯ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿ ಉತ್ತರ ಪ್ರದೇಶದ ಕುರ್ಜಾದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬಿಹಾರ, ರಾಜಸ್ಥಾನ,ಹಿಮಾಚಲ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯಗಳನ್ನು ಸೋಲಿಸಿ ಫೈನಲ್ ಪ್ರವೇಶಿಸಿ ಫೈನಲ್ ನಲ್ಲಿ ಬಲಿಷ್ಠ ಉತ್ತರಪ್ರದೇಶ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸ್ಕೂಲ್ ಗೇಮ್ಸ್ ಆಫ್ ಫೆಡರೇಷನ್ ಇಂಡಿಯಾದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here