ಕೋಲ್ಚಾರು : ಕನ್ನಡಿತೋಡು ಬಳಿ ಕಾರು ಅಫಘಾತ- ಪ್ರಯಾಣಿಕರಿಗೆ ಗಾಯ

0

ಬೆಂಗಳೂರಿನಿಂದ ಕೇರಳದ ಬಂದಡ್ಕ ಕಡೆಗೆ ಕೋಲ್ಚಾರು ಮಾರ್ಗವಾಗಿ ಸಂಚರಿಸುತ್ತಿದ್ದ ಟಾಟಾ ನೆಕ್ಸೋನಾ ಬೆಂಗಳೂರು ರಿಜಿಸ್ಟ್ರೇಸನ್ ಹೊಂದಿದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೊಡೆಗೆ ಡಿಕ್ಕಿ ಹೊಡೆದ ಘಟನೆ ಅ.17 ರಂದು ವರದಿಯಾಗಿದೆ‌. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದು ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಕಾರಿನ ಮುಂಭಾಗ ಜಖಂ ಗೊಂಡಿದೆ.