ವಿಶೇಷ ಚೇತನ, ಹಾಡುಗಾರ್ತಿ ರಾಜೇಶ್ವರಿ ಬೊಳುಬೈಲು ಹೃದಯಾಘಾತದಿಂದ ನಿಧನ

0

 

ಜಾಲ್ಸೂರು ಗ್ರಾಮದ ಬೊಳುಬೈಲು ಕಾರ್ಯಪ್ಪ ನಾಯ್ಕರವರ ಪುತ್ರಿ, ಜಾಲ್ಸೂರು ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ, ಹಾಡುಗಾರ್ತಿ, ಸಂಗೀತಾ ಗುರುಗಳಾಗಿದ್ದ ವಿಶೇಷ ಚೇತನ ರಾಜೇಶ್ವರಿ ಬೊಳುಬೈಲು ರವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಸುಮಾರು 30 ವರ್ಷ ವಯಸ್ಸಾಗಿತ್ತು.

ರಾಜೇಶ್ವರಿಯವರಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸುಳ್ಯದ ಜ್ಯೋತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಿಗ್ಗೆ ಒಂದೊಮ್ಮೆಲೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪುವ ಮೊದಲೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ವಿಶೇಷ ಚೇತನರಾಗಿದ್ದ ರಾಜೇಶ್ವರಿಯವರು ಜಾಲ್ಸೂರು ಪಂಚಾಯತ್ ನಲ್ಲಿ ಕಳೆದ 5 ವರ್ಷಗಳಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿದ್ದರು.

ಸುಶ್ರಾವ್ಯ ಹಾಡುಗಾರರಾಗಿದ್ದ ಅವರು ಅನೇಕರಿಗೆ ಸಂಗೀತಾ ತರಬೇತುದಾರರಾಗಿ ತೊಡಗಿಸಿಕೊಂಡು ಹೆಸರಾಗಿದ್ದರು. ಭಜಕರಾಗಿಯೂ ತೊಡಗಿಸಿಕೊಂಡಿದ್ದ ಅವರನ್ನು ಅನೇಕ ಸಂಘಸಂಸ್ಥೆಗಳು ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದೆ.

ಮೃತರು ತಂದೆ, ತಾಯಿ ವಾರಿಜ ಓರ್ವ ಸಹೋದರ ಚಿದಾನಂದ ಹಾಗೂ ಇಬ್ಬರು ಸಹೋದರಿಯರಾದ ರಮ್ಯ ನಾರಾಯಣ ಮತ್ತು ರಾಧಿಕಾ ಪರಮೇಶ್ವರ ಹಾಗೂ ಬಂಧುಗಳನ್ನು ಅಗಲಿದ್ದಾರೆ.