ಅಪಾಯವನ್ನು ಆಹ್ವಾನಿಸುತ್ತಿರುವ  ಸುಳ್ಯ ನಗರದ ಮುಖ್ಯ ರಸ್ತೆಯ ಫುಟ್ಬಾತ್ ತಡೆ ಬೇಲಿಗಳು

0

 

ಎಚ್ಚರ ತಪ್ಪಿದರೆ ಅಪಾಯ ಖಚಿತ

ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಫುಟ್ಪಾತ್ ಗೆ ಅಳವಡಿಸಿರುವ ತಡೆ ಬೇಲಿಗಳು ಕೆಲವು ಕಡೆಗಳಲ್ಲಿ ತುಕ್ಕು ಹಿಡಿದು ಅಡಿಭಾಗದಿಂದಲೇ ತುಂಡಾಗಿ ರಸ್ತೆಯ ಚರಂಡಿಯ ಸ್ಲಾಬಿನ ಮೇಲೆ ವಾಲಿಕೊಂಡು ನಿಂತಿದೆ.


ಬೇಲಿಯ ತಳಭಾಗದಲ್ಲಿ ತುಕ್ಕು ಹಿಡಿದು ಫುಟ್ಬಾತಿನ ಮೇಲೆ ನಡೆದಾಡುವ ಜನರಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ
ಈ ಭಾಗದಲ್ಲಿ ನಡೆದಾಡುವವರು ತಿಳಿಯದೆ ಇದರ ಮೇಲೆ ಭಾರ ಹಾಕಿ ನಿಂತರೆ ಮೈಮೇಲೆ ಬೀಳುವುದಂತು ನಿಶ್ಚಿತವಾಗಿದೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ವಯೋವೃದ್ದರೂ, ಸಾರ್ವಜನಿಕರು ನಡೆದಾಡಲು ಈ ರಸ್ತೆಯನ್ನು ಬಳಸುತ್ತಿದ್ದು ಮುಂದೊಂದು ದಿನ ಅನಾಹುತ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಇದಕ್ಕೆ ಸಂಬಂಧಿಸಿದ ಕೆ ಆರ್ ಡಿ ಸಿ ಎಲ್ ಸಂಸ್ಥೆಯವರು ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.
ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ಮೊಗರ್ಪಣೆ ವರೆಗೆ ಈ ತಡೆ ಬೇಲಿಯನ್ನು ಹಾಕಲಾಗಿದ್ದು ಗಾಂಧಿನಗರ ಆರ್ ಕೆ ಸ್ಟೀಲ್ ಅಂಗಡಿಯ ಬಳಿ, ಶ್ರೀರಾಮ್ ಪೇಟೆ ಸಂಗಮ್ ಬಿಲ್ಡಿಂಗ್, ಜ್ಯೋತಿ ವೃತ್ತದ ಬಳಿ ಈ ರೀತಿಯ ಘಟನೆಗಳು ಎದ್ದು ಕಾಣುತ್ತಿದೆ.
ಕೆಲವು ಕಡೆಗಳಲ್ಲಿ ಬೇಲಿಗೆ ಅಳವಡಿಸಲಾಗಿರುವ ಕಬ್ಬಿಣದ ಸರಳುಗಳು ಬಗ್ಗಿಕೊಂಡು ಅವೈಜ್ಞಾನಿಕ ಸ್ಥಿತಿಯಲ್ಲಿ ಕಂಡುಬರುತ್ತಿದೆ.