ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ

0


ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂ. ೨೬ರಂದು ನಡೆಯಿತು. ಬ್ಯಾಂಡ್ ಸೆಟ್ ಮೂಲಕ ನೂತನ ಮಂತ್ರಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಶಾಲಾ ಸಂಚಾಲಕರಾದ ರೆ | ಫಾದರ್ ವಿಕ್ಟರ್ ಡಿ’ಸೋಜ ದೀಪ ಪ್ರಜ್ವಲನೆ ಮೂಲಕ ವಿದ್ಯಾರ್ಥಿ ಸರಕಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶುಭ ಆಶೀರ್ವಾದ ನೀಡಿದರು. ಮುಖ್ಯ ಅತಿಥಿ ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಾಗೂ ನಾಯಕತ್ವ ಗುಣ ಬೆಳೆಸುವ ಮೂಲಕ ಯಾವ ರೀತಿ ಉತ್ತಮ ವ್ಯಕ್ತಿತ್ವ ರೂಪಿಸಬೇಕು ಎನ್ನುವ ಬಗ್ಗೆ ಮಾತನಾಡುತ್ತಾ ನೂತನ ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಶುಭ ಕೋರಿದರು. ಪ್ರೌಢ ಶಾಲಾ ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷ ಹೇಮನಾಥ್ ಕೊಡಿಯಾಲಬೈಲ್ ಉಪಸ್ಥಿತರಿದ್ದು, ನೂತನ ವಿದ್ಯಾರ್ಥಿ ಮಂತ್ರಿ ಮಂಡಲಕ್ಕೆ ಶುಭ ಕೋರಿದರು. ೧೦ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೀಟಲತಾ ಡಿ’ಸಿಲ್ವ ಆಯ್ಕೆಯಾದ ನೂತನ ಶಾಲಾ ನಾಯಕ ಹಾಗೂ ಎಲ್ಲಾ ವಿದ್ಯಾರ್ಥಿ ಮಂತ್ರಿಗಳಿಗೆ ಹಾಗೂ ವಿರೋಧ ಪಕ್ಷದ ಸದಸ್ಯರುಗಳಿಗೆ ಪ್ರಮಾಣವಚನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಹಾಗೂ ಎಲ್ಲಾ ಮಂತ್ರಿಗಳ ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಿ ಕೊಟ್ಟರು . ಕಳೆದ ಸಾಲಿನ ವಿದ್ಯಾರ್ಥಿ ಸರಕಾರದಲ್ಲಿದ್ದ ಮಂತ್ರಿಗಳು ಶಾಲಾ ಧ್ವಜ ಹಾಗೂ ಫೈಲನ್ನು ಶಾಲಾ ನಾಯಕ ಹಾಗೂ ಶಾಲಾ ನಾಯಕಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ನಾಯಕ ಹಿಮಾಂಷು ಹಾಗೂ ಉಪನಾಯಕಿ ಫಾತಿಮತ್ ಸನ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು .


೯ನೇ ತರಗತಿ ವಿದ್ಯಾರ್ಥಿನಿ ಶಿಝಾ ಖದೀಜ ಸ್ವಾಗತಿಸಿ, ೯ನೇ ತರಗತಿಯ ವಿದ್ಯಾರ್ಥಿ ಅನ್ವಯ್ ವಂದಿಸಿದರು. ೧೦ನೇ ತರಗತಿಯ ವಿದ್ಯಾರ್ಥಿನಿ ನಿಷ್ಕ ಡಿ’ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸೋಜಾ ಸಾಜು , ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರರು ಸಹಕರಿಸಿದರು.