ಜೂ.3: ಏನೆಕಲ್ಲಿನಲ್ಲಿ ಶ್ರೀ ಹರಿ ಕ್ಲಿನಿಕ್ ಶುಭಾರಂಭ

0

ಏನೆಕಲ್ಲು ಮುಖ್ಯ ರಸ್ತೆಯ “ಶ್ರೀ ಹರಿಭಾನು” ನಿಲಯ ಚಿದ್ಗಲ್ ಮನೆಯಲ್ಲಿ ಶ್ರೀ ಹರಿ ಕ್ಲಿನಿಕ್ ಜೂ.3 ರಂದು ಶುಭಾರಂಭಗೊಳ್ಳಲಿದೆ.

ಏನೆಕಲ್ಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಲಕ್ಷ್ಮಿ ಕ್ಲಿನಿಕ್‌ನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಏನೆಕಲ್ಲು ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ವೇದಾವತಿ, ಇನ್ನರ್‌ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ಶ್ರುತಿ ಮಂಜುನಾಥ್ ಉಪಸ್ಥಿತರಿರುವರು.

ಇಲ್ಲಿ ಡಾ|ಭಾನುಮತಿ ಹರಿಶ್ಚಂದ್ರರವರು ಪ್ರತಿ ದಿನ ಬೆಳಿಗ್ಗೆ 8.30 ರಿಂದ 10.30 ರ ತನಕ, ಸಂಜೆ 5.30 ರಿಂದ 7.30 ರ ತನಕ, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ಚಿಕಿತ್ಸೆಗೆ ಲಭ್ಯವಿರುತ್ತಾರೆ.