ಮೂರ್ಜೆ ಮೂರ್ಕಜೆ ಕುಟುಂಬದ ವತಿಯಿಂದ ಧರ್ಮಪಾಲನಾಥ ಸ್ವಾಮೀಜಿ ಭೇಟಿ – ಕೃತಜ್ಞತೆ ಸಲ್ಲಿಕೆ

0

 

ಕಾರ್ಯಕ್ರಮದ ಕುರಿತು ಅವಲೋಕನ ಸಭೆ

ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಅ.22ರಂದು ನಡೆದ ಗುರುವಂದನಾ ಕುಟುಂಬ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸಿ, ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಂಗಳೂರಿನ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಕೃತಜ್ಞತೆ ಸಲ್ಲಿಕೆ ಹಾಗೂ ಕಾರ್ಯಕ್ರಮದ ಕುರಿತು ಅವಲೋಕನ ಸಭೆಯು ಅ.25ರಂದು ನಡೆಯಿತು.

ವಿಟ್ಲದ ಅಕ್ಷಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ಆಗಮಿಸಿ, ಆಶೀರ್ವಚನ ನೀಡಿದ್ದರು. ಈ ಪ್ರಯುಕ್ತ ಸ್ವಾಮೀಜಿಗಳನ್ನು ಭೇಟಿ ಮಾಡಿದ ಮೂರ್ಜೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ರಾಧಾಕೃಷ್ಣ ಮೂರ್ಜೆ, ಮೋಹನ್ ಗೌಡ ಕಾಣಿಚ್ಚಾರು, ನವೀನ್ ಮುರೂರು, ನಾಗೇಶ್ ಮೂರ್ಜೆ, ಕೇಶವ ಕೊಡಿಂಜ, ಸತೀಶ್ ಮೂರ್ಜೆ, ಸನತ್ ಮೂರ್ಜೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.


ಸಂಜೆ ಕನಕಮಜಲಿನ ರಾಧಾಕೃಷ್ಣ ಮೂರ್ಜೆ ಅವರ ಮನೆಯಲ್ಲಿ ಕಾರ್ಯಕ್ರಮದ ಕುರಿತು ಅವಲೋಕನ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮೂರ್ಜೆ ಕುಟುಂಬಸ್ಥರು ಉಪಸ್ಥಿತರಿದ್ದರು.