ಚೂಂತಾರು ಲಕ್ಷ್ಮೀನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಸಭೆ

0

 

ಮರೆಯಾದ ವೇದ ವಿದ್ವಾಂಸ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ಮಾಜಿ ಸಚಿವ ರಮಾನಾಥ ರೈ
ವೈದಿಕ ಪರಂಪರೆಯೆಂದರೆ ಹೇರಿಕೆಯ, ಶೋಷಣೆಯ ಪದ್ಧತಿಯಲ್ಲ. ಅದೊಂದು ಜೀವನ ಕ್ರಮ. ಭಾರತದ ಸನಾತನ ಸಂಸ್ಕೃತಿ ಪರಂಪರೆಯ ಭಗವಾಗಿರುವ ವೇದ, ಉಪನಿಷತ್ತು, ಮಹಾಕಾವ್ಯ ಹಾಗೂ ಧಾರ್ಮಿಕ ಆಚಾರ – ವಿಚಾರಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಂತಹ ಸನಾತನ ಸಂಸ್ಕೃತಿ ಪರಂಪರೆಯ ಹಿರಿಯ ಕೊಂಡಿಯಾಗಿ ಸುಮಾರು ನಾಲ್ಕು ದಶಕಗಳ ಕಾಲ ಪುರೋಹಿತರಾಗಿ, ಸೇವೆ ಸಲ್ಲಿಸಿದ ವೇದ ವಿದ್ವಾಂಸರು ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು. ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ಬಹಳಷ್ಟು ಮನೆಗಳ ಮನೆಗಳ ಆರಾಧನಾ ಪರಂಪರೆಯ ಭಾಗವಾಗಿ, ಧಾರ್ಮಿಕ ಆಚರಣೆಗಳ ಪುರೋಹಿತರಾಗಿ, ವೃತ್ತಿ ಪಾವಿತ್ರ್ಯವನ್ನು ಕಾಯ್ದುಕೊಂಡು ಬದುಕಿದ ಲಕ್ಷ್ಮೀನಾರಾಯಣ ಭಟ್ಟರು ನಮ್ಮನ್ನಗಲಿರುವುದು ಸಂಸ್ಕೃತಿ ಪರಂಪರೆಯ ವಿಭಾಗಕ್ಕೊಂದು ದೊಡ್ಡ ತುಂಬಲಾರದ ನಷ್ಟ. ಅವರ ಸಾವಿನ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಅ. 27ರಂದು ಲಕ್ಷ್ಮೀನಾರಾಯಣ ಭಟ್ಟರ ಉತ್ತರಕ್ರಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಲಕ್ಷ್ಮೀನಾರಾಯಣ ಭಟ್ಟರ ಮಕ್ಕಳಾದ ಮಹೇಶ್ ಭಟ್ಟ ಚೂಂತಾರು, ಡಾ. ಮುರಲೀಮೋಹನ್ ಚೂಂತಾರು, ನಾಕೇಶ ಚೂಂತಾರು, ಶ್ರೀಮತಿ ಗೀತಾ ಗಣೇಶ್ ಕುರಿಯ, ಮಂಗಳೂರು ಸೇರಿದಂತೆ ಲಕ್ಷ್ಮೀನಾರಾಯಣ ಭಟ್ಟರ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಮತ್ತು ಅಪಾರ ಶಿಷ್ಯ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಷ್ಪನಮನ ಸಲ್ಲಿಸಿದರು.