ಮುಕ್ಕೂರು : ದಿ.ಜನಾರ್ದನ ರೈ ಕನ್ನೆಜಾಲು ಸ್ಮರಣಾರ್ಥ ದ.ಕ.ಜಿಲ್ಲಾ ಮಟ್ಟದ ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಕೂಟ

0

 

ಫ್ರೆಂಡ್ಸ್ ಪೊಳಲಿ : ಪ್ರಥಮ ,  ನ್ಯೂ ಶೈನ್ ಮಂಗಳೂರು :ದ್ವಿತೀಯ

ಟೀಂ ಶೈನ್ ಕುಂಡಡ್ಕ-ಮುಕ್ಕೂರು ಇದರ ಆಶ್ರಯದಲ್ಲಿ ದಿ.ಜನಾರ್ದನ ರೈ ಕನ್ನೆಜಾಲು ಸ್ಮರಣಾರ್ಥ ದ.ಕ.ಜಿಲ್ಲಾ ಮಟ್ಟದ 12 ತಂಡಗಳ ಮಹಿಳಾ ವಿಭಾಗದ ಲೀಗ್ ಮಾದರಿಯ ತ್ರೋಬಾಲ್ ಪಂದ್ಯಾಟ ಮುಕ್ಕೂರು ಶಾಲಾ ವಠಾರದಲ್ಲಿ ಅ.30 ರಂದು ನಡೆಯಿತು.

 

ಪೊಳಲಿ : ಪ್ರಥಮ
ಮಂಗಳೂರು : ದ್ವಿತೀಯ
ಹನ್ನೆರಡು ತಂಡಗಳ ನಡುವೆ ನಡೆದ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ಪೊಳಲಿ ಪ್ರೆಂಡ್ಸ್ (ಪ್ರ), ನ್ಯೂ ಶೈನ್ ಮಂಗಳೂರು (ದ್ವಿ), ನಾಗಶ್ರೀ ಫ್ರೆಂಡ್ಸ್ ಸುಳ್ಯ (ತೃ), ಮಿತ್ರ ಬಳಗ ಬಾಳಗೋಡು (ಚ) ಪ್ರಶಸ್ತಿ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ಪೊಳಲಿ ತಂಡದ ಅನುಶ್ರೀ, ಭವ್ಯ, ಮಂಗಳೂರು ತಂಡದ ಅನಾಮಿಕಾ, ದೀಕ್ಷಿತಾ, ಸುಳ್ಯ ತಂಡದ ಭವಿತಾ, ತಿಲಕಾ ಅವರು ಬಹುಮಾನ ಪಡೆದುಕೊಂಡರು. ಪ್ರತಿ ಪಂದ್ಯಾಟದ ವಿಜೇತ ತಂಡದ ಅತ್ಯುತ್ತಮ ಆಟಗಾರ್ತಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದ
ಆಟಗಾರ್ತಿಗೆ ಸಮ್ಮಾನ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ತ್ರೋಬಾಲ್ ಪಟು, ಪುತ್ತೂರು ವಿಕ್ಟರ್ಸ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಪೂರ್ಣಿಮಾ ಪಾದೆಲಾಡಿ ಅವರನ್ನು ಸನ್ಮಾನಿಸಲಾಯಿತು. ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಸಮ್ಮಾನಿಸಿದರು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ, ಇದೊಂದು ಅತ್ಯುತ್ತಮ ಪ್ರಯತ್ನ. ಇಂತಹ ಕ್ರೀಡಾಕೂಟ ಆಯೋಜಿಸಿದ ಸಂಘಟಕರು ಅಭಿನಂದನೆಗೆ ಅರ್ಹರು ಎಂದರು. ದಿವಂಗತ ಜನಾರ್ದನ ರೈ ಕನ್ನೆಜಾಲು ಅವರ ಕುರಿತು ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ಸಂಸ್ಮರಣಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಎಣ್ಣೂರು ಸ.ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ, ಹೊಸಮಠ-ಕುಟ್ರುಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಸದಸ್ಯ ಜಗನ್ನಾಥ ಜಿ., ಸವಣೂರು ಪ್ರಾ.ಕೃ.ಪ.ಸ.ಸಂಘದ ಸದಸ್ಯ ಕರುಣಾಕರ ಪೂಜಾರಿ ಪಟ್ಟೆ, ಜನಜಾಗೃತಿ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ ಸವಣೂರು ಉಪಸ್ಥಿತರಿದ್ದರು. ಮುಕ್ಕೂರು-ಕುಂಡಡ್ಕ ನ್ಯೂ ಶೈನ್ ತಂಡದ ಸಂಚಾಲಕ ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ರಮೇಶ್ ನಿಡ್ಮಾರು ವಂದಿಸಿದರು.

ಉದ್ಘಾಟನಾ ಸಮಾರಂಭ
ಬೆಳಗ್ಗೆ ಪಂದ್ಯಾಕೂಟವನ್ನು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಉದ್ಘಾಟಿಸಿ ಶುಭ ಹಾರೈಸಿದರು. ದಿವಂಗತ ಜನಾರ್ದನ ರೈ ಕನ್ನೆಜಾಲು ಅವರ ಭಾವಚಿತ್ರಕ್ಕೆ ಶಶಿಕಲಾ ನಾರಾಯಣ ರೈ ಅವರು ಮಾಲಾರ್ಪಣೆಗೈದರು. ಪೆರುವಾಜೆ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಬೆಳ್ಳಾರೆ ಸಿ.ಎ.ಬ್ಯಾಂಕ್ ನಿರ್ದೇಶಕಿ ಸಾವಿತ್ರಿ ಚಾಮುಂಡಿಮೂಲೆ, ಪುಣ್ಚಪ್ಪಾಡಿ ಟೀಂ ಯುನೈಟೆಡ್ ಈಗಲ್ಸ್ ಪದವು ಇದರ ಗೌರವಾಧ್ಯಕ್ಷ ಆನಂದ ನಿಡ್ಮಾರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುರುಷೋತ್ತಮ ಕುಂಡಡ್ಕ ವಹಿಸಿದ್ದರು. ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನವೀನ್ ಶೆಟ್ಟಿ ಬರಮೇಲು, ಅಂಚೆ ಇಲಾಖೆ ಉದ್ಯೋಗಿ ರಘು ಎಸ್ ಸವಣೂರು, ಉದ್ಯಮಿ ಕಾರ್ತಿಕ್ ರೈ ಕನ್ನೆಜಾಲು, ಕಾನಾವು ಶ್ರೀ ವಾರಿಯರ್ಸ್‌ ತಂಡದ ಮಾಲಕ ದಿನೇಶ್ ಕಂರ್ಬುತ್ತೋಡಿ, ಪವರ್ ಬ್ರೇಕರ್ ನ ದೀಕ್ಷಿತ್, ಪುಣ್ಚಪ್ಪಾಡಿ ಟೀಂ ಯುನೈಟೆಡ್ ಈಗಲ್ಸ್ ಪದವು ಸದಸ್ಯ ಸುರೇಶ್ ಉಪಸ್ಥಿತರಿದ್ದರು. ರಮೇಶ್ ನಿಡ್ಮಾರು ಬಹುಮಾನಿತರ ಪಟ್ಟಿ ವಾಚಿಸಿದರು. ಪಂದ್ಯಾಕೂಟದ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಪ್ರಸಾದ್ ರೈ, ಪ್ರದೀಪ್, ಜೆಸ್ಮಿತಾ ಕೊಡಂಕೇರಿ ಸಹಕರಿಸಿದರು. ಪಂದ್ಯಾಕೂಟಕ್ಕೆ ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಪುಣ್ಚಪ್ಪಾಡಿ ಟೀಂ ಯುನೈಟೆಡ್ ಈಗಲ್ಸ್ ಪದವು ಸಹಯೋಗ ನೀಡಿತು.