ಸುಬ್ರಹ್ಮಣ್ಯ ವಾಲ್ಮೀಕಿ ಆಶ್ರಮ ಶಾಲಾ ಮೇಲ್ವಿಚಾರಕ ಕೃಷ್ಣಪ್ಪ ಗೌಡ ನಿವೃತ್ತಿ

0

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಸುಬ್ರಹ್ಮಣ್ಯದ ವಾಲ್ಮೀಕಿ ಆಶ್ರಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮತ್ತು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಪ್ಪ ಗೌಡ ಬಿಲಿನೆಲೆ ಅ. 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.


1991ರಲ್ಲಿ ಸಮಾಜಕಲ್ಯಾಣ ಇಲಾಖೆಗೆ ಗ್ರೂಪ್‌ ಡಿ. ನೌಕರರಾಗಿ ಸೇರ್ಪಡೆಗೊಂಡು 1993ರಿಂದ ಬಂಟ್ವಾಳ ತಾಲೂಕಿನ ವಿವಿಧ ಹಾಸ್ಟೆಲ್ ಗಳಲ್ಲಿ ಪ್ರಭಾರ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ಬಳಿಕ 2015ರಲ್ಲಿ ಜೂನಿಯರ್ ವಾರ್ಡನ್ ಆಗಿ ಪದೋನ್ನತಿ ಹೊಂದಿದರು. ನಂತರ 2018 ರಿಂದ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮತ್ತು ಮೇಲ್ವಿಚಾರಕರಾಗಿ ನಿಯುಕ್ತಿಗೊಂಡು ಒಟ್ಟು ಸುಮಾರು 32 ವರ್ಷಗಳ ಕಾಲ ಸೇವೆ ಸಲ್ಲಿಸಿ ಅ. 31ರಂದು ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ಇವರ ಮಕ್ಕಳಾದ ರೇಣುಕಾದೇವಿ ಬಿ.ಕೆ. ಮತ್ತು ಯಶಸ್ವಿನಿ ಬಿ.ಕೆ ವಿದೇಶದಲ್ಲಿ ಉದ್ಯೋಗಿಗಳಾಗಿದ್ದರೆ, ಕು. ಪೂಜಾ ಬಿ.ಕೆ ಮತ್ತು ಪೂರ್ವಿ ಬಿ.ಕೆ ಅಂತಿಮ ವರ್ಷದ ಫಿಜಿಯೋಥೆರಫಿ ಕೋರ್ಸ್ ಮಾಡುತ್ತಿದ್ದಾರೆ. ಇನ್ನೋರ್ವ ಪುತ್ರಿ ಕು. ಭಾಷಿತ ಬಿ.ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಪಿ.ಯು. ಕಾಲೇಜಿನಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಪತ್ನಿ ಜಲಜಾಕ್ಷಿ ಗೃಹಿಣಿಯಾಗಿದ್ದಾರೆ.