ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

 

67ನೇ ಕನ್ನಡ ರಾಜ್ಯೋತ್ಸವನ್ನು  ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಯಶೋದಾ  ರಾಮಚಂದ್ರ ರವರು ದೀಪ ಬೆಳಗಿಸಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.  ವಿದ್ಯಾರ್ಥಿನಿ ಸ್ಪೂರ್ತಿ ಅವರು ಕನ್ನಡ ನಾಡು ನುಡಿ ಬೆಳೆದು ಬಂದ ಹಾದಿಯ ಬಗ್ಗೆ  ತಿಳಿಸಿದರು.

ವಿದ್ಯಾರ್ಥಿಗಳಾದ ಕವನ, ಬೃಂದ ಸುರೇಶ್, ಸಂಸ್ಕೃತಿ,ಇವರು ಕವನ ವಾಚನ ಮಾಡಿದರು.ಸಾನಿಧ್ಯ ಮತ್ತು ತಂಡದವರಿಂದ ಗೀತ ಗಾಯನ ನಡೆಸಲಾಯಿತು.ಕಾರ್ಯಕ್ರಮವನ್ನು ಪ್ರಥಮ್ ಶೇಖರ್ ಸ್ವಾಗತಿಸಿ ,ನರೆನ್ ವಂದಿಸಿದರು. ಕನ್ನಡದ ಅಧ್ಯಾಪಕರಾದ ಕವಿತಾ ಎಮ್ ಕೆ ರವರು ಕಾರ್ಯಕ್ರಮವನ್ನು ಆಯೋಜಿಸಿದರು.ಕಾರ್ಯಕ್ರಮಕ್ಕೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ ಹಾಗೂ ಕಾಲೇಜಿನ ಸಿಇಒ ಡಾ.ಉಜ್ವಲ್ ಯು ಜೆ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರು ಸಿಬ್ಬಂದಿಗಳು ಉಪಸ್ಥಿತರಿದ್ದರು.