ಕೆಂಪೇ ಗೌಡ ಪ್ರತಿಮೆ: ರಥ ಯಾತ್ರೆಗೆ ಅಮೈ ಮಡಿಯಾರಿನಲ್ಲಿ ಸ್ವಾಗತ, ಪವಿತ್ರ ಮೃತ್ತಿಕೆ ಸಂಗ್ರಹ

0

ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇ ಗೌಡ ಕಂಚಿನ ಪ್ರತಿಯೆಯ ಹಿನ್ನೆಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು, ಈ ಅಭಿಯಾನ ರಥವು ನ‌.02 ರಂದು ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರಿಗೆ ಆಗಮಿಸಿತು.

ಅಮೈ ಮಡಿಯಾರಿನ ಸ.ಹಿ.ಪ್ರಾ ಶಾಲೆಯ ಕೆದಂಬಾಡಿ ರಾಮಯ್ಯ ಗೌಡ ದ್ವಾರದ ಬಳಿ ರಥ ಸ್ವಾಗತಿಸಿ, ಮೃತ್ತಿಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಶ್ಯಾಮ್ ಪಾನತ್ತಿಲ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಚಿತ್ರಾಕುಮಾರಿ, ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಗ್ರಾಮಕರಣಿಕ ಮಂಜುನಾಥ, ಪಂಚಾಯತ್ ಸದಸ್ಯರುಗಳಾದ ಪೂರ್ಣಿಮಾ ಸೂ0ತೋಡು, ದೇವಕಿ ಕುತ್ಪಜೆ, ಭವಾನಿ ಮೂರ್ಜೆ, ಪಿಡಿಒ ವಿದ್ಯಾಧರ್, ಪಂಚಾಯತ್ ಮಾಜಿ ಸದಸ್ಯ ಶಶಿಧರ ನಾಯರ್ , ಅಪ್ಪಯ್ಯ ಸೂ0ತೋಡು, ಆದಿತ್ಯ ಮದುವೆಗದ್ದೆ, ರಾಧಾಕೃಷ್ಣ ಮಾಣಿಬೆಟ್ಟು ಶಾಲಾ ಮುಖ್ಯೋಪಾಧ್ಯರಾದ ಪದ್ಮನಾಭ ಅತ್ಯಾಡಿ, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಶಾಂತ್ ಪಾನತ್ತಿಲ ಸ್ವಾಗತಿಸಿ, ಪಿಡಿಓ ವಂದಿಸಿದರು