ನಿಂತಿಕಲ್ಲು ಡಿಂಪಲ್ ಡಿಜಿಟಲ್ ಸೇವಾ ಕೇಂದ್ರ 4ನೇ ವರ್ಷಕ್ಕೆ ಪಾದಾರ್ಪಣೆ

0

ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ನಲ್ಲಿರುವ ಡಿಂಪಲ್ ಡಿಜಿಟಲ್ ಸೇವಾ ಕೇಂದ್ರ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಯುಕ್ತ ನ.೧ ರಂದು ವಿಶೇಷ ಶಿಬಿರ ನಡೆಯಿತು.

ಅರ್ಚಕ ವಿಘ್ನೇಶರ ಭಟ್ ಮತ್ತು ಬಳಗ ಕಲ್ಮಡ್ಕರವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಮುರುಳ್ಯ ಗ್ರಾಮಪಂಚಾಯತ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯದ ಎಣ್ಮೂರು ಮತ್ತು ಎಣ್ಮೂರು ಎ. ಒಕ್ಕೂಟ, ನಿಂತಿಕಲ್ಲು ಆಟೊ ರಿಕ್ಷಾ ಚಾಲಕ ಮಾಲಕರ ಸಂಘ ಇದರ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ಆಧಾರ್ ತಿದ್ದುಪಡಿಗೆ 1ದಿನದ ವಿಶೇಷ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಶಿಬಿರ ನಡೆಯಿತು. ಊರಿನ ಹಲವಾರು ಜನರು ಇದರ ಪ್ರಯೋಜನವನ್ನು ಪಡೆದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶ್ರೀಮತಿ ಲತಾ ಮತ್ತು ಎನ್.ಟಿ.ವಸಂತ, ಅವರ ತಾಯಿ ಶ್ರೀಮತಿ ಕಮಲ, ತಂದೆ ತಿಮ್ಮಪ್ಪ ಗೌಡ ನಳಿಯಾರು, ಕುಸುಮಾಧರ ಎನ್.ಟಿ., ಕುಟುಂಬದ ಸದಸ್ಯರು, ನಿಂತಿಕಲ್ಲು ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ, ನ್ಯಾಯವಾದಿ ಜಗದೀಶ್ ಹುದೇರಿ, ಪಿ ಸಿ ಜಯರಾಮ್, ಬಿ ರಮನಾಥ ರೈ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಬಾಲಕೃಷ್ಣ ಬಲ್ಲೇರಿ, ಯುವ ನ್ಯಾಯವಾದಿ ಅವಿನಾಶ್ ಬೈತಡ್ಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್, ಚಂದ್ರಶೇಖರ ಕಾಮತ್, ರಮೇಶ್ ಕೋಟೆ, ಸಂಶುದ್ದೀನ್, ಸಚಿನ್ ರಾಜ್ ಶೆಟ್ಟಿ, ಸುಧೀರ್ ರೈ ಮೇನಾಲ, ಕಡಬ ಬ್ಲಾಕ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ, ಎನ್.ಜಿ. ಲೋಕನಾಥ ರೈ ಎಣ್ಮೂರು, ಮಾಯಿಲಪ್ಪ ಗೌಡ ಎಣ್ಮೂರು, ಶಿಕ್ಷಕ ಕುಶಾಲಪ್ಪ ಜಿ., ಲಕ್ಷ್ಮೀಶ ಬೆಳೆರಿ, ರಾಧಾಕೃಷ್ಣ ಜಿ., ದಯಾನಂದ ಕೆಬ್ಬೋಡಿ, ಊರವರು ಉಪಸ್ಥಿತರಿದ್ದರು.