ಜಟ್ಟಿಪಳ್ಳ : ಸಾಮೂಹಿಕ ಗೋಪೂಜೆ

0

 

ಸುಳ್ಯ ಜಟ್ಟಿಪಳ್ಳದ ಶ್ರೀರಾಮ ಭಜನಾ ಸೇವಾ ಸಂಘ, ಮತ್ತು ಮಾನಸ ಮಹಿಳಾ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಟ್ಟಿಪಳ್ಳದ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ಸಾಮೂಹಿಕ ಗೋಪೂಜೆ ಮತ್ತು ದೀಪಾವಳಿ ಹಬ್ಬದ ಆಚರಣೆ ಸರಳವಾಗಿ ನೆರವೇರಿತು.

 

ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ. ಜೆ. ರೈ ರವರು ಗೋಪೂಜೆ ಮಹತ್ವ ದ ಬಗ್ಗೆ ಮಾತನಾಡಿದರು. ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರೀಶ್ಚಂದ್ರ ಎಂ. ಆರ್, ಉಪಾಧ್ಯಕ್ಷ ರಮಾನಂದ. ರೈ ಜಟ್ಟಿಪಳ್ಳ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ರೇವತಿ ಗೋಪಾಲ್, ಕಾರ್ಯದರ್ಶಿ ಶೈಲಜಾ ಪಿ. ರೈ, ಯುವಕ ಮಂಡಲದ ಕಾರ್ಯದರ್ಶಿ ವಿಪಿನ್ ಕರ್ಕೇರ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಣೆ ಮಾಡಿದರು , ಸಂತೋಷ್ ಶೆಟ್ಟಿ ವಂದನಾರ್ಪಣೆ ಮಾಡಿದರು, ಮಹಿಳಾ ಮಂಡಲ ಸದಸ್ಯರು ಗೋಪೂಜೆ ನೆರವೇರಿಸಿದರು.