ನ.12: ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವಾರ್ಷಿಕೋತ್ಸವ

0

 

ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಸಮಾರಂಭ- ಸಂಗೀತ ರಸಮಂಜರಿ

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವಾರ್ಷಿಕೋತ್ಸವದ ಅಂಗವಾಗಿ
ಸುಳ್ಯ ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಾಟ ಮತ್ತು
ಸನ್ಮಾನ ಸಮಾರಂಭವು ನ. 12 ರಂದು ಸಂಜೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಎದುರಿನ ಜೆ.ಓ.ಸಿ ಕ್ರೀಡಾಂಗಣದಲ್ಲಿ ನಡೆಯಲಿರುವುದು.
ಪಂದ್ಯಾಟದ ಉದ್ಘಾಟನಾ ಸಮಾರಂಭವು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕೀಡಾಂಗಣ ಮತ್ತು ಪಂದ್ಯಾಟದ ಉದ್ಘಾಟನೆಯನ್ನು ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ರವರು ನೆರವೇರಿಸಲಿರುವರು.
ಮುಖ್ಯ ಅಭ್ಯಾಗತರಾಗಿ ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬಾಬು ವಿಟ್ಲ, ರಾಜಶೇಖರ ಶೆಟ್ಟಿ, ಎಂ ವೆಂಕಪ್ಪ ಗೌಡ, ತಹಶಿಲ್ದಾರ್ ಕು ಅನಿತಾಲಕ್ಷ್ಮಿ,ನ.ಪಂ.ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಡಾ ಲೀಲಾಧರ ಡಿ.ವಿ, ಎನ್. ಎ. ರಾಮಚಂದ್ರ, ಬಿ ಕೆ ಮಾಧವ, ಎಂ. ಬಿ. ಸದಾಶಿವ, ನವೀನ್ ಚಂದ್ರ ಜೋಗಿ, ಡಾ ನಂದಕುಮಾರ್, ಪಿ.ಬಿ. ಸುಧಾಕರ ರೈ, ಕೆ. ಎಂ. ಮುಸ್ತಫಾ, ಕೆ.ಟಿ ವಿಶ್ವನಾಥ, ಹರೀಶ್ ನಾಯ್ಕ್,ಮಹೇಶ್ ಭಟ್, ಗುರುದತ್ ನಾಯಕ್ ಸುಳ್ಯ, ಗಿರಿಧರ ಸ್ಕಂದ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಕೆದಿಲ ನರಸಿಂಹ ಭಟ್ ಧ್ವನಿ ಬೆಳಕು ಮತ್ತು ಶಾಮಿಯಾನದ ಮಾಲಕರು ಬೆಳ್ಳಾರೆ, ಜೀವನ್ ರಾಂ ಸುಳ್ಯ ರಂಗನಿರ್ದೇಶಕರು, ಎಸ್. ಪಿ. ಲೋಕನಾಥ್ ಗೌರವಾಧ್ಯಕ್ಷರು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ, ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿ ಕು.ಸಾನ್ವಿ ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು.
ವಿಶೇಷ ಆಕರ್ಷಣೆಯಾಗಿ ಕ್ರೀಡಾಪಟುಗಳ ಆಕರ್ಷಣೀಯ ಪಥಸಂಚಲನವು ಸುಳ್ಯ ಖಾಸಗಿ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಮೈದಾನದಲ್ಲಿ ಸೇರಲಿದೆ.  ವಿಶೇಷವಾಗಿ ಆಕರ್ಷಕ ಸುಡುಮದ್ದು ಪ್ರದರ್ಶನ ಮತ್ತು ಖ್ಯಾತ ಕಲಾವಿದರಿಂದ ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು. ಪಂದ್ಯಾಟ ಮುಗಿದ ಬಳಿಕ ಸಮಾರೋಪ ಸಮಾರಂಭವು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಗಿರಿಧರ ಸ್ಕಂದ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್ ರವರು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಜಿ.ನಾಯಕ್ ಗುರುಪ್ರಸಾದ್ ಶಾಮಿಯಾನ ಸುಳ್ಯ, ಕೆ.ಎಂ ಅಬ್ದುಲ್ ಮಜೀದ್ ಜನತಾ ಗ್ರೂಫ್ ಸುಳ್ಯ, ಜಯಪ್ರಕಾಶ್ (ಪಕ್ಕು) ಸ್ವಾಾತಿ ಮೈಕ್ಸ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ ಲಕ್ಕಿಡಿಪ್ ಕೂಪನ್ ನ ಡ್ರಾ ವನ್ನು ಫೈನಲ್ ಪಂದ್ಯಾಟದ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಸಲಾಗುವುದು.
ಸಂಘದ ವಾರ್ಷಿಕ ಮಹಾಸಭೆಯು ನ.15 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಗಿರಿಧರ ಸ್ಕಂದ ರವರ ಅಧ್ಯಕ್ಷತೆಯಲ್ಲಿ ನಡೆಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಲೋಕನಾಥ್ ಎಸ್.ಪಿ,ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಖಜಾಂಜಿ ಮಧುಸೂದನ್ ನಾಯರ್, ಸಂಘಟನಾ ಕಾರ್ಯದರ್ಶಿ ಶಾಫಿ ಪೈಚಾರು, ಗುರುದತ್ ನಾಯಕ್ ಸುಳ್ಯ, ಜತೆ ಕಾರ್ಯದರ್ಶಿ ಶಿವಪ್ರಕಾಶ್ ಸುಳ್ಯ ಉಪಸ್ಥಿತರಿದ್ದರು.