ಸುಳ್ಯ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರಾಗಿ ಶೀನಪ್ಪ ಬಯಂಬು ಅವಿರೋಧ ಆಯ್ಕೆ

0

 

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನ. 5 ರಂದು ಚುನಾವಣೆ ನಡೆದಿದ್ದು ಸಂಘದ ನಿರ್ದೇಶಕರಾದ ಶೀನಪ್ಪ ಬಯಂಬು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ನಿರ್ದೇಶಕರಾದ ನವೀನ್ ಕುಮಾರ್ ಸೂಚಕರಾಗಿ ಹಾಗೂ ಮನ್ಮಥ ಎಎಸ್ ಅನುಮೋದಕರಾಗಿ ಸಹಿ ಮಾಡಿದರು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಅಭಿವೃದ್ಧಿ ಅಧಿಕಾರಿಯಾಗಿರುವ ಶಿವಲಿಂಗಯ್ಯ ನಡೆಸಿಕೊಟ್ಟರು. ಸಂಘದ ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ, ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕರಾದ ಹರೀಶ್ ಬೂಡುಪನ್ನೆ, ಮಾಜಿ ಉಪಾಧ್ಯಕ್ಷರಾದ ವೆಂಕಟ್ರಮಣ ಮುಳ್ಯ, ನಿರ್ದೇಶಕರಾದ ಮನ್ಮಥ ಎ ಎಸ್, ನವೀನ್ ಕುಮಾರ್ ಕೆ ಎಂ, ವಾಸುದೇವ ನಾಯಕ್ ಪಿ, ಶ್ರೀಮತಿ ಹರಿಣಿ ಸದಾನಂದ ಕೆ, ಅಬ್ದುಲ್ ಕುಂಞ ಎನ್, ದಾಮೋದರ ಮಂಚಿ ಕೆ, ಜಯರಾಮ ಪಿ ಜಿ ಉಪಸ್ಥಿತರಿದ್ದರು.
ಸುಳ್ಯ ಭೂ ಬ್ಯಾಂಕಿನ ನಿರ್ದೇಶಕರಾದ ಸೋಮನಾಥ ಪೂಜಾರಿ ಕೆ, ಸುಳ್ಯ ನಗರ ಭಾರತೀಯ ಜನತಾ ಪಾರ್ಟಿಯ ಸುಳ್ಯ ನಗರದ ಶಕ್ತಿ ಕೇಂದ್ರದ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಉಪಸ್ತಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಸುದರ್ಶನ್ ಎಸ್.ಪಿ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.