ಸುಳ್ಯ: ಮರಾಟಿ ಸಮಾಜ ಸೇವಾ ಸಂಘದಿಂದ ಮುಖ್ಯ ಮಂತ್ರಿಯವರಿಗೆ ಕೃತಜ್ಞತಾ ಕಾರ್ಯಕ್ರಮ

0

 

ನಾಗ ಮೋಹನ್‌ ದಾಸ್ ವರದಿಯನ್ನು ಉಲ್ಲೇಖಿಸಿ
ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಏರಿಸಿದ ಸರಕಾರದ ನಡೆಯನ್ನು ಸ್ವಾಗತಿಸಿ ನ. 5ರಂದು ಸಂಘದ ಮಾಸಿಕ ಸಭೆಯಲ್ಲಿ ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಇಂಧನ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಸಚಿವರಾದ ಶ್ರೀರಾಮುಲು ಸೇರಿದಂತೆ ಸಹಕಾರ ನೀಡಿದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್, ಗೌರವಾಧ್ಯಕ್ಷ ಸೀತಾನಂದ ಬೇರ್ಪಡ್ಕ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ, ಉಪಾಧ್ಯಕ್ಷರಾದ ಐತ್ತಪ್ಪ ಎನ್, ಜತೆ ಕಾರ್ಯದರ್ಶಿ ಧರ್ಮಣ್ಣ ನಾಯ್ಕ್ ಗರಡಿ, ಕ್ರೀಡಾ ಕಾರ್ಯದರ್ಶಿ ಜನಾರ್ಧನ ನಾಯ್ಕ್ ಕೇರ್ಪಳ, ಸಂಘಟನಾ ಕಾರ್ಯದರ್ಶಿ ಈಶ್ವರ ವಾರಣಾಶಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೋನಪ್ಪ ನಾಯ್ಕ್ ಸೌದಾಮಿನಿ ಪಂಜ, ಶ್ರೀಮತಿ ಸುಲೋಚನ ನಾರಾಯಣ, ಶ್ರೀಮತಿ ಶೋಭ ಎ.ಕೆ. ನಾಯ್ಕ್, ನಿತ್ಯಾನಂದ ಕುಡೆಂಬಿ, ಸಂಘದ ಗೌರವ ಸಲಹೆಗಾರರಾದ ಜಿ. ಬುದ್ಧ ನಾಯ್ಕ್, ಯುವ ವೇದಿಕೆಯ ಅಧ್ಯಕ್ಷ ಮೋಹನ್ ಪೆರಾಜೆ, ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು, ಸದಸ್ಯೆ ಶ್ರೀಮತಿ ಸರೋಜಾ ಈಶ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.