ಅರಂತೋಡು : ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ.ಮಂಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸುಳ್ಯ ತಾಲ್ಲೂಕು ಐ.ಇ.ಸಿ.ವಿಭಾಗ ವತಿಯಿಂದ ಆರೋಗ್ಯ ಸೋಮವಾರ ಮತ್ತು ಚುಕ್ಕಿ-ಚಂದ್ರಮ ಆರೋಗ್ಯ ಮಾಹಿತಿ ಕಾರ್ಯಕ್ರಮ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಠಾರದಲ್ಲಿ ನ.7ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಸಿಯಾ ಅಶ್ರಫ್ ಗುಂಡಿ ವಹಿಸಿದರು.ಆರೋಗ್ಯ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ .ಟಿ.ರವರು ವಿಶ್ವ ನಿಮೋನಿಯ ದಿನಾಚರಣೆ ಗರ್ಭ ಕಂಠದ ಕ್ಯಾನ್ಸರ್ ಮತ್ತು ಜೆ.ಇ.ಚುಚ್ಚುಮದ್ದು ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಅರಂತೋಡು,ಕಿರಿಯ ಮಹಿಳಾ ಆರೋಗ್ಯ ಸಂರಕ್ಷಾಧಿಕಾರಿ ಪುಷ್ಪಲತಾ ಕೆ.ಆರ್, ಆಶಾ ಕಾರ್ಯಕರ್ತರಾದ ಭವಾನಿ,ಶಾರದಾ,ಹಾಗೂ ಶ್ಯಾಮಲ ಉಪಸ್ಥಿತರಿದ್ದರು .ಪ್ರಾಥಮಿಕ ಆರೋಗ್ಯ ಕೇಂದ್ರ ಆಶಾ ಫೆಸಿಲಿಟೇಟರ್ ತಿರುಮಲೇಶ್ವರಿ ಉಳುವಾರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು .